ಡಿಕೆ ಶಿವಕುಮಾರ್ ಟಿಕೆಟ್ ಮಾರಾಟ ಮಾಡಿದ್ದಾರೆ- ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಕಿಡಿ.

ಮಂಗಳೂರು,ಏಪ್ರಿಲ್,20,2023(www.justkannada.in):  ವಿಧಾನಸಭೆ ಚುನಾವಣಾ ಕಣ ರಂಗೇರಿದ್ದು, ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಈ ನಡುವೆ ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​  ಕೈತಪ್ಪಿದ್ದ ಹಿನ್ನೆಲೆ ಕಾಂಗ್ರೆಸ್ ಗೆ ಮೊಯ್ದೀನ್ ಬಾವಾ ಗುಡ್ ಬೈ ಹೇಳಿದ್ದಾರೆ.

ಕಾಂಗ್ರೆಸ್ ಗೆ ರಾಜೀನಾಮೆ ಘೋಷಿಸಿ ಮಾತನಾಡಿದ ಮೊಯಿದ್ದೀನ್ ಬಾವಾ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಾಂಗ್ರೆಸ್ ಟಿಕೆಟ್​ ಅನ್ನು ಮಾರಾಟ ಮಾಡಿದ್ದಾರೆ, ಹಾಲಿ ಅಭ್ಯರ್ಥಿ ಇನಾಯತ್ ಅಲಿ ಟಿಕೆಟ್​ಗಾಗಿ 2 ಕೋಟಿ ರೂ. ಕೊಟ್ಟಿದ್ದಾರೆ. ಇನಾಯತ್ ಅಲಿ ಡಿಕೆ ಶಿವಕುಮಾರ್​ ಅವರ ಬಿಸ್ನೆಸ್ ಪಾರ್ಟ್ನರ್. ಡಿಕೆ ಶಿವಕುಮಾರ್ ಕೇಸ್ ನಲ್ಲಿ ಇನಾಯತ್ ತಮ್ಮನನ್ನ ಇಡಿ ವಿಚಾರಣೆ ಮಾಡಿತ್ತು ಹಾಗಾಗಿ ಟಿಕೆಟ್ ನೀಡಲಾಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ತೊರೆದಿರುವ ಮೊಯಿದ್ದೀನ್ ಬಾವಾ ಜೆಡಿಎಸ್ ಸೇರ್ಪಡೆಗೊಂಡು ಮಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

Key words: DK Shivakumar – sold-tickets – Congress-former MLA- Moiddeen Bawa.