ಎಸ್.ಎಂ ಕೃಷ್ಣ ಅವರ ಸಹೋದರ ಪುತ್ರ ಎಸ್.ಗುರುಚರಣ್ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ.

ಮಂಡ್ಯ,ಏಪ್ರಿಲ್ ,20,2023(www.justkannada.in):  ಮದ‍್ಧೂರು ಕ್ಷೇತ್ರದಿಂದ ಟಿಕೆಟ್ ಕೈತಪ್ಪಿದ ಹಿನ್ನೆಲೆ  ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ  ಅವರ ಸಹೋದರನ ಪುತ್ರ ಎಸ್.ಗುರುಚರಣ್   ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದಾರೆ.

ಕಾಂಗ್ರೆಸ್  ತಮ್ಮ ಬದಲಿಗೆ ಕದಲೂರು ಉದಯ್ ಗೆ ಟಿಕೆಟ್ ನೀಡಿದ ಹಿನ್ನೆಲೆ  ಅಸಮಾಧಾನಗೊಂಡಿರುವ ಗುರುಚರಣ್ ಇಂದು ಜೆಡಿಎಸ್ ಪಕ್ಷ ಸೇರಿದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಮದ್ದೂರು ಸೋಮನಹಳ್ಳಿ ಗ್ರಾಮದಲ್ಲಿರುವ ಗುರುಚರಣ್ ಮನೆಗೆ ಭೇಟಿ ನೀಡಿ ಗುರುಚರಣ್ ರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಜೆಡಿಎಸ್ ಸೇರ್ಪಡೆ ಬಳಿಕ ಮಾತನಾಡಿದ ಗುರು ಚರಣ್ , ಕಾಂಗ್ರೆಸ್ ನವರು  ದುಡ್ಡುಕೊಟ್ರೆ ಟೆರರಿಸ್ಟ್ ಗಳಿಗಾದ್ರೂ ಟಿಕೆಟ್ ಕೊಡ್ತಾರೆ. ಡಿಕೆ ಶಿವಕುಮಾರ್ ನಮ್ಮ ಕುಟುಂಬಕ್ಕೆ ಮೋಸ ಮಾಡಿದ್ದಾರೆ. ನನಗೆ ಟಿಕೆಟ್ ನೀಡುವುದಾಗಿ ಹೇಳಿ ನನ್ನನ್ನ ಮುಗಿಸಿದರು. ಕಾಂಗ್ರೆಸ್ ನಿರ್ನಾಮವಾಗೋದು ಸತ್ಯ ಎಂದು ಕಿಡಿಕಾರಿದರು.

Key words: S. Gurucharan- left -Congress – joined- JDS.