ವಿದ್ಯುತ್ ತಂತಿ ತಗುಲಿ ಇಬ್ಬರು ಬಾಲಕರು ಸಾವು.

0
1

ತುಮಕೂರು,ಏಪ್ರಿಲ್,20,2023(www.justkannada.in): ವಿದ್ಯುತ್ ತಂತಿ ತಗುಲಿ ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು ಬೆಳಗುಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.  ನಿತೇಶ್ (14) ಪ್ರಜ್ವಲ್ (13)  ಮೃತಪಟ್ಟ ಬಾಲಕರು.  ಮನೆ ಮೇಲೆ  ಆಟವಾಡುವಾಗ ಈ ದುರಂತ ಸಂಭವಿಸಿದೆ.  ಮನೆ ಮೇಲೆ ಹಾದು ಹೋಗಿದ್ದ ತಂತಿ ತಗುಲಿ ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ.

ಇದಕ್ಕೆ  ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಪೋಷಕರು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಕುರಿತು ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Two boys -died – electric- wire-tumkur