Tuesday, September 22, 2026

BDA Apartments

ಕೋರ್ಟ್ ಮೊರೆ ಹೋದವರನ್ನ ಸಂಪುಟದಿಂದ ವಜಾ ಮಾಡಿ- ಶಾಸಕ ಸಾ.ರಾ ಮಹೇಶ್ ಆಗ್ರಹ… BDA JK...
Home Front Page ಕೋರ್ಟ್ ಮೊರೆ ಹೋದವರನ್ನ ಸಂಪುಟದಿಂದ ವಜಾ ಮಾಡಿ- ಶಾಸಕ ಸಾ.ರಾ ಮಹೇಶ್ ಆಗ್ರಹ…

ಕೋರ್ಟ್ ಮೊರೆ ಹೋದವರನ್ನ ಸಂಪುಟದಿಂದ ವಜಾ ಮಾಡಿ- ಶಾಸಕ ಸಾ.ರಾ ಮಹೇಶ್ ಆಗ್ರಹ…

ಮೈಸೂರು,ಮಾರ್ಚ್,6,2021(www.justkannada.in):  ಕೋರ್ಟ್  ಮೊರೆ ಹೋಗಿರುವವರನ್ನು ಸಚಿವ ಸಂಪುಟದಿಂದ ವಜಾ ಮಾಡಿ ಎಂದು ಕೆ.ಆರ್ ನಗರ ಶಾಸಕ ಸಾ.ರಾ.ಮಹೇಶ್‌  ಆಗ್ರಹಿಸಿದ್ದಾರೆ.jk

ಸಚಿವರು ಕೋರ್ಟ್ ಮೊರೆ ಹೋದ ವಿಚಾರ ಕುರಿತು ಮೈಸೂರಿನಲ್ಲಿ ಇಂದು ಮಾತನಾಡಿದ ಶಾಸಕ ಸಾ.ರಾ ಮಹೇಶ್,  ಇದನ್ನು ಸದನದಲ್ಲೂ ಒತ್ತಾಯ ಮಾಡುತ್ತೇನೆ. ಸಚಿವರು ಅರ್ಜಿ ಹಾಕಿರುವುದು ತಲೆ ತಗ್ಗಿಸುವ ವಿಚಾರ. ಇದೆಲ್ಲದರ ಹಿಂದೆ ಒಂದು ಷಡ್ಯಂತ್ರ ಇದೆ, ಅದು ಆಚೆಗೆ ಬರಬೇಕು. ಬಾಂಬೆಯಲ್ಲೂ ಅಷ್ಟು  ಬಿಗಿ ಭದ್ರತೆ ಇಟ್ಟುಕೊಂಡಿದ್ದವರು ಯಾಕೆ ಅರ್ಜಿ ಹಾಕಿದ್ದೀರಿ? ಇವರನ್ನು ಇಟ್ಟುಕೊಂಡು ಬ್ಲಾಕ್‌ಮೆಲ್ ಮಾಡುವ ಷಡ್ಯಂತ್ರ ಮೊದಲೇ ಆಗಿತ್ತಾ?  ಎಂದು ಪ್ರಶ್ನಿಸಿದರು.Dismiss –cabinet- Court –MLA-SA RA mahesh

ಇನ್ನು ಸಿಎಂ ಬಿಎಸ್ ವೈ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ ಸಾರಾ ಮಹೇಶ್, ವಿಡಿಯೊ ಪ್ರಸಾರಕ್ಕೆ ತಡೆ ಕೋರಿ ಅರ್ಜಿ ಹಾಕಿರುವುದು ಶಾಸಕಾಂಗಕ್ಕೆ ಮಾಡಿದ ಅಪಮಾನ‌. ತಪ್ಪು ಮಾಡದೆ ಇದ್ದರೆ ನೀವ್ಯಾಕೆ ನ್ಯಾಯಾಲಯಕ್ಕೆ ಹೋಗಿದ್ದೀರಿ. ಬಾಂಬೆಗೆ ಹೋದವರ ಬಗ್ಗೆ ಇನ್ನು ಏನೇನು ಇದೇಯೊ. ಈ ರೀತಿಯ ಸರ್ಕಾರ ತರುವುದಕ್ಕೆ ಬಾಂಬೆಗೆ ಹೋಗಿದ್ದು, ಇದೇನಾ ನಿಮ್ಮ ಘನಕಾರ್ಯ  ಎಂದು ಲೇವಡಿ ಮಾಡಿದರು.

Key words: Dismiss –cabinet- Court –MLA-SA RA mahesh