Sunday, September 13, 2026

BDA Apartments

ಭಾರತ-ಪಾಕಿಸ್ತಾನ ಪಂದ್ಯಕ್ಕೆ ಕಾತರ: ಇದರಲ್ಲಿ ಆಡುವುದೇ ಹೆಮ್ಮೆ ಎಂದ ಕೊಹ್ಲಿ BD...
Home Front Page ಭಾರತ-ಪಾಕಿಸ್ತಾನ ಪಂದ್ಯಕ್ಕೆ ಕಾತರ: ಇದರಲ್ಲಿ ಆಡುವುದೇ ಹೆಮ್ಮೆ ಎಂದ ಕೊಹ್ಲಿ

ಭಾರತ-ಪಾಕಿಸ್ತಾನ ಪಂದ್ಯಕ್ಕೆ ಕಾತರ: ಇದರಲ್ಲಿ ಆಡುವುದೇ ಹೆಮ್ಮೆ ಎಂದ ಕೊಹ್ಲಿ

ಲಂಡನ್, ಜೂನ್ 14, 2019 (www.justkannada.in): ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

ಭಾರತ-ಪಾಕಿಸ್ತಾನ ಪಂದ್ಯವೆಂದರೆ ಅದು ಯುದ್ಧಭೂಮಿಯ ಹೋರಾಟದಷ್ಟೇ ಜಿದ್ದಾ ಜಿದ್ದಿನ ವೇದಿಕೆಯಾಗಿರುತ್ತದೆ. ಇಂತಹದ್ದೊಂದು ಪ್ರಮುಖ ವೇದಿಕೆಯಲ್ಲಿ ಆಡುವುದೇ ನಮಗೆ ಗೌರವ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.

‘ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಮೈದಾನಕ್ಕೆ ಕಾಲಿಟ್ಟಾಗ ಎಲ್ಲಾ ಆವೇಶಗಳು ತಣ್ಣಗಾಗಿ ನಮ್ಮ ಕೌಶಲ್ಯ ಪ್ರದರ್ಶನದತ್ತ ಗಮನಹರಿಸುತ್ತೇವೆ. ಕೇವಲ ಹೊಸ ಆಟಗಾರರಿಗೆ ಮಾತ್ರ ಆ ವಿಶೇಷ ಆವೇಶ ಹಾಗೇ ಉಳಿದುಕೊಳ್ಳಬಹುದು. ಈ ಪಂದ್ಯದಲ್ಲಿ ಆಡುವುದೇ ನಮಗೆ ಹೆಮ್ಮೆಯ ವಿಷಯ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.