ಬಾಡಿಗೆ ಮನೆ ಪ್ರಕರಣ: ಯಶ್’ಗೆ ನೋಟಿಸ್ ನೀಡಲು ಪೊಲೀಸರ ಸಿದ್ಧತೆ

ಬೆಂಗಳೂರು, ಜೂನ್ 14, 2019 (www.justkannada.in): ನಟ ಯಶ್​ಬಾಡಿಗೆ ಮನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆಯ ಹಂತವಾಗಿ ಯಶ್ ತಾಯಿ ಹಾಗೂ ಮತ್ತಿತರರಿಗೆ ಗಿರಿನಗರ ಠಾಣಾ ಪೊಲೀಸರು ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ.

ಇತ್ತೀಚೆಗೆ ಹೈಕೋರ್ಟ್​ ನೀಡಿದ್ದ​ ಆದೇಶದ ಹಿನ್ನೆಲೆಯಲ್ಲಿ ಜೂನ್ 7ರಂದು ಯಶ್ ಕುಟುಂಬ ಈ ಹಿಂದೆ ವಾಸವಾಗಿದ್ದ ಬಾಡಿಗೆ ಮನೆಯನ್ನು ಖಾಲಿ ಮಾಡಿತ್ತು. ಆದ್ರೆ, ಈ ವೇಳೆ ಸುಮಾರು 28 ಲಕ್ಷ ರೂ. ಮೌಲ್ಯದ ಮನೆಯ ವಸ್ತುಗಳು ಡ್ಯಾಮೇಜ್​ ಆಗಿತ್ತು.

ಮನೆ ಮಾಲೀಕರಾದ ಡಾ.ವನಜಾ ಅವರು ಇದು ಯಶ್ ತಾಯಿ ಪುಷ್ಪ ನಡೆಸಿದ ಕೃತ್ಯ ಎಂದು ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಬಳಿಕ ಗಿರಿನಗರ ಠಾಣಾ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.