Tuesday, September 22, 2026

BDA Apartments

ದೇಶದಲ್ಲಿ ಕೊರೋನಾ ಆರ್ಭಟ: ಒಂದೇ ದಿನ 28,498 ಕೊರೋನಾ ಕೇಸ್ ಪತ್ತೆ… BDA JK_Adv BDA Adv
Home Front Page ದೇಶದಲ್ಲಿ ಕೊರೋನಾ ಆರ್ಭಟ: ಒಂದೇ ದಿನ  28,498 ಕೊರೋನಾ ಕೇಸ್ ಪತ್ತೆ…

ದೇಶದಲ್ಲಿ ಕೊರೋನಾ ಆರ್ಭಟ: ಒಂದೇ ದಿನ  28,498 ಕೊರೋನಾ ಕೇಸ್ ಪತ್ತೆ…

ನವದೆಹಲಿ,ಜು,14,2020(www.justkannada.in):  ದೇಶದಲ್ಲಿ ಮಹಾಮಾರಿ ಕೊರೋನಾ ಆರ್ಭಟ ಜೋರಾಗಿದ್ದು ಒಂದೇ ದಿನದಲ್ಲಿ ಹೊಸದಾಗಿ 28,498 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.jk-logo-justkannada-logo

ಒಂದೇ ದಿನ 28 ಸಾವಿರಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಪ್ರಕರಣ ಕಾಣಿಸಿಕೊಳ್ಳುವ ಮೂಲಕ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 9,06,752ಕ್ಕೆ ಏರಿಕೆಯಾಗಿದೆ. ಇನ್ನು 24 ಗಂಟೆಗಳಲ್ಲಿ 553 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದು ಕೊರೋನಾಗೆ ಸಾವನ್ನಪ್ಪಿದವರ ಸಂಖ್ಯೆ 23,727ಕ್ಕೆ ಏರಿಕೆಯಾಗಿದೆ.country-28498-corona-case-detection-single-day

ದೇಶದಲ್ಲಿ 5,71,460 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 3,11,565 ಕೊರೋನಾ ಪ್ರಕರಣಗಳು ಸಕ್ರಿಯವಾಗಿವೆ.  ಲಾಕ್ ಡೌನ್ ಸಡಿಲವಾದ ಬಳಿಕ ದೇಶದಲ್ಲಿ ಸೋಂಕಿತರ ಪ್ರಮಾಣ ದಿನೇ ದಿನೇ ಏರಿಕೆಯಾಗುತ್ತಿದ್ದು, ಕರೋನಾ ತಡೆಗಟ್ಟಲು ಕ್ರಮ ಕೈಗೊಳ್ಳುವ ನಿರ್ಧಾರವನ್ನ ಕೇಂದ್ರ ಸರ್ಕಾರ ರಾಜ್ಯಸರ್ಕಾರಕ್ಕೆ ಬಿಟ್ಟಿದೆ.

Key words: country-28,498 Corona case -detection – single day.