Thursday, July 30, 2026

BDA Apartments

Home Front Page “ಕೊರೊನಾ ಲಸಿಕೆ ದಾಸ್ತಾನು ಸಿದ್ದತೆ” :  ಸಚಿವ ಡಾ.ಕೆ.ಸುಧಾಕರ್ ಪರಿಶೀಲನೆ

“ಕೊರೊನಾ ಲಸಿಕೆ ದಾಸ್ತಾನು ಸಿದ್ದತೆ” :  ಸಚಿವ ಡಾ.ಕೆ.ಸುಧಾಕರ್ ಪರಿಶೀಲನೆ

ಬೆಂಗಳೂರು,ಜನವರಿ,10,2021(www.justkannada.in) : ಕೊರೊನಾ ಲಸಿಕೆ ದಾಸ್ತಾನು ಸಿದ್ದತೆಯನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇಂದು ಪರಿಶೀಲನೆ ನಡೆಸಿದರು.jk-logo-justkannada-mysore

ಆನಂದರಾವ್ ವೃತ್ತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಟ್ಟಡದಲ್ಲಿ ಕೊರೊನಾ ಲಸಿಕೆ ದಾಸ್ತಾನಿಗೆ ನಡೆದಿರುವ ಸಿದ್ದತೆಯನ್ನು ಖುದ್ದು ಸಚಿವರು ಪರಿಶೀಲನೆ ಮಾಡಿದರು.

ಕೊರೊನಾ ಲಸಿಕೆಯ ಮೊದಲ ಕಂತು ಒಂದೆರಡು ದಿನದಲ್ಲಿ ರಾಜ್ಯಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಲಸಿಕೆಯನ್ನು ಸುರಕ್ಷಿತವಾಗಿ ದಾಸ್ತಾನು ಮಾಡುವ ಸಂಬಂಧ ಸ್ಥಳ ಪರಿಶೀಲನೆಯನ್ನು ಸಚಿವರು ಮಾಡಿದರು. ಈಗಾಗಲೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೊರೊನಾ ಲಸಿಕೆ ಕುರಿತ ತಾಲೀಮನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದರು.Corona-Vaccine-Inventory-Readiness-Minister-Dr.K.Sudhakar-Inspection

ಸದ್ಯದಲ್ಲೇ ಕೊರೊನಾ ವಾರಿಯರ್ಸ್‍ಗೆ ಮೊದಲ ಹಂತದಲ್ಲಿ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ನಾಳೆ ಸಂಜೆ ವೇಳೆಗೆ ಮೊದಲ ಹಂತದ ಲಸಿಕೆ ನೀಡುವ ದಿನಾಂಕವನ್ನು ಕೇಂದ್ರ ಸರ್ಕಾರ ಘೋಷಣೆ ಮಾಡುವ ಸಾಧ್ಯತೆಗಳಿವೆ ಎಂದು ತಿಳಿಸಿದರು.

key words : Corona-Vaccine-Inventory-Readiness-Minister-Dr.K.Sudhakar-
Inspection