“ಮೇಯರ್ ಅವಧಿ ವಿಸ್ತರಿಸಲು ಸಿಎಂಗೆ ಪತ್ರದ ಮೂಲಕ ಮನವಿ” : ಮೇಯರ್ ತಸ್ನೀಂ

ಮೈಸೂರು,ಜನವರಿ,10,2021(www.justkannada.in) : ಕೊರೊನಾದಿಂದಾಗಿ ನನ್ನ ಅವಧಿಯಲ್ಲಿ ಕೆಲಸ ಮಾಡಲಾಗಿಲ್ಲ. ಹೀಗಾಗಿ, ಮೇಯರ್ ಅವಧಿ ವಿಸ್ತರಿಸಲು ಸಿಎಂಗೆ ಪತ್ರ ಬರೆದು ಮನವಿ ಮಾಡುತ್ತೇನೆ ಎಂದು ಮೇಯರ್ ತಸ್ನೀಂ ಹೇಳಿದ್ದಾರೆ.jk-logo-justkannada-mysore

ನಾಳೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಪತ್ರ ನೀಡುತ್ತೇನೆ. ಕೊರೊನಾದಿಂದಾಗಿ ನನ್ನ ಅವಧಿಯಲ್ಲಿ ಕೆಲಸ ಮಾಡಲಾಗಿಲ್ಲ. ಹೀಗಾಗಿ, ಮೇಯರ್ ಅವಧಿ ವಿಸ್ತರಿಸಲು ಮನವಿ ಮಾಡುತ್ತೇನೆ ಎಂದಿದ್ದಾರೆ.

ನನ್ನ ಅವಧಿಯಲ್ಲಿ ಆಗಿರುವ ಕೆಲಸ ಕಾರ್ಯಗಳ ಬಗ್ಗೆ ಬೇಸರವಿದೆ. ನಮ್ಮೊಟ್ಟಿಗೆ ಮೈತ್ರಿಯಲ್ಲಿದ್ದ ಕಾಂಗ್ರೆಸ್ ನವರು ಕೌನ್ಸಿಲ್ ನಲ್ಲಿ ಸಹಕಾರ ನೀಡಿಲ್ಲ. ರಾಜ್ಯ ಸರ್ಕಾರ ಯಾವುದೇ ಅನುದಾನ ನೀಡಿಲ್ಲ. ಪಾಲಿಕೆಯಲ್ಲಿ ಆದಾಯವೂ ಬರಲಿಲ್ಲ ಎಂದು ಬೇಸರವ್ಯಕ್ತಪಡಿಸಿದ್ದಾರೆ.Mayor-Period-extend-Letter-CM Written-Appeal-Mayor-Tasneem

ಮೇಯರ್ ವಿವೇಚನಾ ಕೋಟಾದ ಅನುದಾನವನ್ನು ಕೊಟ್ಟಿಲ್ಲ. ಇಷ್ಟೆಲ್ಲಾದರ ಜೊತೆಗೆ ಕೆಲವು ತಾಂತ್ರಿಕ ಕಾರಣದಿಂದ ಅಭಿವೃದ್ಧಿ ಕೆಲಸ ಮಾಡಲಿಕ್ಕೆ ಆಗಿಲ್ಲ. ನನಗೆ ಮೇಯರ್ ಅವಧಿ ವಿಸ್ತರಿಸಬೇಕು. ಹೀಗಾಗಿ, ನಾಳೆ ಮೈಸೂರಿಗೆ ಸಿಎಂ ಬರುತ್ತಿದ್ದು, ಈ ಸಂದರ್ಭ ಮನವಿ ಪತ್ರ ನೀಡುತ್ತೇನೆ ಎಂದು ತಸ್ನೀಂ ತಿಳಿಸಿದ್ದಾರೆ.

key words : Mayor-Period-extend-Letter-CM Written-Appeal-Mayor-Tasneem