ಕೊರೋನಾ ಸೋಂಕು ಹೆಚ್ಚಳ ಹಿನ್ನೆಲೆ: ಬೆಂಗಳೂರಿನ 7ರಿಂದ 10 ಏರಿಯಾ ಸೀಲ್ ಡೌನ್ ಗೆ ನಿರ್ಧಾರ…

ಬೆಂಗಳೂರು,ಜೂ,22,2020(www.justkannada.in): ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಮಾರಕ ಕೊರೊನಾ ವೈರಸ್ ದಿನೇ ದಿನೇ ಹೆಚ್ಚುತ್ತಿದ್ದು,  ಜನರಲ್ಲಿ ಭಾರಿ ಆತಂಕ ಮೂಡಿಸಿದೆ. ಹೀಗಾಗಿ ಕೊರೋನಾ ಸೋಂಕು ಹೆಚ್ಚಿರುವ ನಗರದ 8ರಿಂದ 10 ಏರಿಯಾಗಳನ್ನ ಸೀಲ್ ಡೌನ್ ಮಾಡಲು ಬಿಬಿಎಂಪಿ ನಿರ್ಧರಿಸಿದೆ.

ಈ ಕುರಿತು ಬಿಬಿಎಂಪಿ ಆಯುಕ್ತರಾದ ಅನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ. ಕೊರೋನಾ ಸೋಂಕು ಹೆಚ್ಚಿರುವ ಏರಿಯಾಗಳನ್ನ ಸೀಲ್ ಡೌನ್ ಮಾಡಲಾಗುತ್ತದೆ. 7 ರಿಂದ 8 ಏರಿಯಾಗಳು ಸೀಲ್ ಡೌನ್ ಮಾಡಲು ನಿರ್ಧರಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸೀಲ್ ಡೌನ್ ಮಾಡದೇ ಬೇರೆ ಮಾರ್ಗವಿಲ್ಲ. ಈ  ಸೀಲ್ ಡೌನ್ ಗೆ  ಸಿಎಂ ಒಪ್ಪಿಗೆ ನೀಡಿದ್ದಾರೆ. ಪೊಲೀಸ್ ಇಲಾಖೆ ಜತೆ ಚರ್ಚಿಸಲಾಗಿದೆ ಎಂದು ತಿಳಿಸಿದರು.corona-bangalore-area-seal-down-bbmp-commissioner-anil-kumar

ಹಾಗೆಯೇ ಸೀಲ್ ಡೌನ್ ಆದ ಪ್ರದೇಶಗಳಲ್ಲಿ  ಎಲ್ಲವೂ ಬಂದ್ ಆಗಲಿದೆ. ದೇಗುಲ, ಚರ್ಚ್, ಮಸೀದಿ ಎಲ್ಲವೂ ಬಂದ್ ಆಗಲಿದೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತಿಳಿಸಿದ್ದಾರೆ. ನಿನ್ನೆ ಒಂದೇ ದಿನ ಬೆಂಗಳೂರಿನಲ್ಲಿ 196 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಕೊರೊನಾ ನಿಯಂತ್ರಣಕ್ಕೆ ಸೀಲ್ ಡೌನ್ ಮಾಡಲು ನಿರ್ಧರಿಸಲಾಗಿದೆ.

Key words: Corona –bangalore- Area-Seal Down –bbmp- Commissioner-Anil kumar