Friday, August 7, 2026

BDA Apartments

Home Front Page ದೇಶ ಮತ್ತು ರಾಜ್ಯ ರಾಜಕೀಯಕ್ಕೆ ಕಾಂಗ್ರೆಸ್ ಮಗ್ಗುಲ ಮುಳ್ಳು-  ಸಚಿವ ಸಿ.ಟಿ ರವಿ ಕಿಡಿ…

ದೇಶ ಮತ್ತು ರಾಜ್ಯ ರಾಜಕೀಯಕ್ಕೆ ಕಾಂಗ್ರೆಸ್ ಮಗ್ಗುಲ ಮುಳ್ಳು-  ಸಚಿವ ಸಿ.ಟಿ ರವಿ ಕಿಡಿ…

ರಾಯಚೂರು,ನ,6,2019(www.justkannada.in): ರಾಜ್ಯ ಮತ್ತು ದೇಶಕ್ಕೆ ಕಾಂಗ್ರೆಸ್ ಮುಳ್ಳು ಇದ್ದಂತೆ. ರಾಜಕೀಯಕ್ಕೆ ಕಾಂಗ್ರೆಸ್  ಮಗ್ಗುಲ ಮುಳ್ಳಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಕಿಡಿಕಾರಿದರು.

ಮಾಧ್ಯಮದ ಜತೆ ಇಂದು ಮಾತನಾಡಿದ ಸಚಿವ ಸಿ.ಟಿ ರವಿ,  ರಾಜಕೀಯ ವ್ಯವಸ್ಥೆಗೆ ಈಗಿನ ಕಾಂಗ್ರೆಸ್ ಮಗ್ಗುಲ ಮುಳ್ಳಾಗಿದೆ. ಮುಳ್ಳನ್ನ ಮುಳ್ಳಿನಿಂದಲೇ ತೆಗೆಯಬೇಕು. ಮಹಾತ್ಮಾ ಗಾಂಧೀಜಿ ಅವರ ಕಾಂಗ್ರೆಸ್ ಈಗ ಉಳಿದಿಲ್ಲ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಆಗಲೇ ಗೋ ಹತ್ಯೆ ಬೇಡ ಎಂದಿದ್ದರು. ಆದರೆ ಇಂದಿನ ಕಾಂಗ್ರೆಸ್ ನಾಯಕರುಅವರ ಆಶಯಕ್ಕೆ ಒತ್ತು ನೀಡಿಲ್ಲ ಎಂದು ಕಿಡಿಕಾರಿದರು.

ಮಹಾತ್ಮಾ ಗಾಂಧೀಜಿ ಕುಟುಂಬ ರಾಜಕಾರಣ ಬೇಡ ಎಂದು ಹೇಳಿದ್ದರು. ಆದರೆ ಈಗ ಕಾಂಗ್ರೆಸ್ ಗೆ ಕುಟುಂಬ ರಾಜಕಾರಣವೇ ಪ್ರಮುಖವಾಗಿದೆ. ಕಳೆದ ವಿಧಾನಸಭೆ ಚುನಾವಣೆಯ ವೇಳೆ ಹೆಚ್.ಡಿಡಿ ಮತ್ತು ಕುಮಾರಸ್ವಾಮಿ ಅವರನ್ನ ಅವಮಾನಿಸಿದ್ದೀರಿ ಚುನಾವಣೆ ನಂತರ ಅವರ ಮುಂದೆಯೇ ಹೋಗಿ ಸರ್ಕಾರ ರಚನೆಗೆ ಕೈಯೊಡ್ಡಿ ನಿಂತಿರಿ ಆಗ ನಿಮ್ಮ ಪಕ್ಷದ ಸಿದ್ಧಾಂತ ಎಲ್ಲಿಗೆ ಹೋಗಿದ್ದವು ಎಂದು ಸಚಿವ ಸಿ.ಟಿ ರವಿ ಲೇವಡಿ ಮಾಡಿದರು.

Key words: Congress -thrives – country – state politics-Minister -CT Ravi