ಹಳೇ ಸಿದ್ಧರಾಮಯ್ಯನವರ ಮಾತೇ ಕೇಳ್ತೀನಿ ಅಂದ್ರೆ ರಜೆ ಹಾಕಿ ಮನೆಗೆ ಹೋಗಿ-ಟಿಪ್ಪು ಜಯಂತಿ ವಿಚಾರದಲ್ಲಿ ಅಧಿಕಾರಿಗಳಿಗೆ ಸಚಿವ ವಿ.ಸೋಮಣ್ಣ ತರಾಟೆ….

ಬಾಗಲಕೋಟೆ,ನ,6,2019(www.justkannada.in):  ಟಿಪ್ಪು ಜಯಂತಿ ಆಚರಣೆ ವಿಚಾರವಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮೈಸೂರು ಜಿಲ್ಲಾಡಳಿತದ ವಿರುದ್ದ ಗರಂ ಆದ ಘಟನೆ ನಡೆದಿದೆ.

ಇಂದು ಬಾಗಲಕೋಟೆ ಪ್ರವಾಸದಲ್ಲಿರುವ  ಸಚಿವ ವಿ.ಸೋಮಣ್ಣ ಟಿಪ್ಪು ಜಯಂತಿ ವಿಚಾರವಾಗಿ ಫೋನಿನಲ್ಲೇ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ. ಬಾಗಲಕೋಟೆ ತೋಟಗಾರಿಕೆ ವಿವಿ ಸಭೆಯ ಮಧ್ಯದಲ್ಲೇ ಅಧಿಕಾರಿಗಳಿಗೆ ಫೋನ್ ನಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಹಳೇ ಸಿದ್ಧರಾಮಯ್ಯನವರ ಮಾತೇ ಕೇಳ್ತೀನಿ ಅಂದ್ರೆ ರಜೆ ಹಾಕಿ ಮನೆಗೆ ಹೋಗ್ತೀರಿ. ಸರ್ಕಾರದ ಆದೇಶ ಏನು ಇದೆಯೋ ಅದನ್ನ ಫಾಲೋ ಮಾಡಿ. ಈಗನ ಸರ್ಕಾರದ ಆದೇಶವನ್ನ ಸೀರಿಯಸ್ ಆಗಿ ಫಾಲೋ ಮಾಡಿ. ಇಲ್ಲದಿದ್ದರೇ ರಜೆ ಹಾಕಿ ಮನೆಗೆ ಹೋಗಿ ಎಂದು ಸಚಿವ ವಿ.ಸೋಮಣ್ಣ ಅಧಿಕಾರಿ ವಿರುದ್ದ ಗರಂ ಆದರು ಎನ್ನಲಾಗಿದೆ.

Key words: Siddaramaiah- Minister –V. Somanna –class-officer-tippu jayanthi