ಶಾಸಕ ಸ್ಥಾನಕ್ಕೆ ರಾಜೀನಾಮೆ ಕುರಿತು ‘ಕೈ’ ಶಾಸಕಿ ಸೌಮ್ಯರೆಡ್ಡಿ ಹೇಳಿದ್ದೇನು ಗೊತ್ತೆ..?

ಬೆಂಗಳೂರು,ಜು,9,2019(www.justkannada.in):  ಶಾಸಕ ಸ್ಥಾನಕ್ಕೆ ರಾಜೀನಾಮೆ ಕುರಿತು ತಂದೆ ಹಾಗೂ ಕ್ಷೇತ್ರದ ಜನರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಕಾಂಗ್ರೆಸ್ ಶಾಸಕರಿ ಸೌಮ್ಯರೆಡ್ಡಿ ತಿಳಿಸಿದರು.

ವಿಧಾನಸೌಧದಲ್ಲಿ ಇಂದು ಸಿಎಲ್ ಪಿ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಿಎಲ್ ಪಿ ಸಭೆ ನಡೆಯಿತು. ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕಿ ಸೌಮ್ಯರೆಡ್ಡಿ, ನಾನೂ ಸಿಎಲ್‌ಪಿ ಮೀಟಿಂಗ್ ಅಟೆಂಡ್ ಮಾಡಿದ್ದೇನೆ. ರಾಜೀನಾಮೆ ಕುರಿತು ತಂದೆ ಹಾಗೂ ಕ್ಷೇತ್ರದ ಜನರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ. ಕ್ಷೇತ್ರದ ಜನ ಮನೆ ಬಳಿ ಬಂದು ರಾಜೀನಾಮೆ ನೀಡದಂತೆ ಒತ್ತಾಯದ ವಿಚಾರವನ್ನ ತಂದೆಯನ್ನ ಕೇಳಿ ಎಂದು ತಿಳಿಸಿದರು.

ಸದ್ಯಕ್ಕೆ ಸಿಎಲ್ ಪಿ ಮೀಟಿಂಗ್ ಆಗಿದೆ. ತಂದೆ 45 ವರ್ಷದಿಂದ ಪಕ್ಷದಲ್ಲಿ ದುಡಿದಿದ್ದಾರೆ. ಅವರ ರಾಜೀನಾಮೆ ಯಾಕೆ ನೀಡಿದ್ರು ಅನ್ನೊದು ನಿಮಗೆ ಗೊತ್ತಿದೆ. ಅದನ್ನ ನಿಮಗೂ ಅವರೇ ಹೇಳಿದ್ದಾರೆ ಎಂದರು.

ಈಗ ಅಸಮಾಧಾನ ಇಲ್ಲ- ಶಾಸಕ ಭೀಮನಾಯಕ್ ಸ್ಪಷ್ಟನೆ..

ಸಿಎಲ್ ಪಿ ಸಭೆ ಬಳಿಕ ಮಾತನಾಡಿದ ಕಾಂಗ್ರೆಸ್ ಶಾಸಕ ಭೀಮನಾಯಕ್ , ಮೊದಲು ನನಗೆ ಅಸಮಧಾನ ಇರೋದು ನಿಜ. ಆದ್ರೆ ಈಗ ಅಸಮಧಾನ ಇಲ್ಲ. ಸರ್ಕಾರ ಉಳಿಸೋ ನಿಟ್ಟಿನಲ್ಲಿ ಸಿಎಲ್ ಪಿ ನಾಯಕರು ತೀರ್ಮಾನ ಕೈಗೊಳ್ತಾರೆ. ಕೆ ಎಂ ಎಫ್ ಅಧ್ಯಕ್ಷರ ವಿಚಾರದಲ್ಲಿ ರಾಜೀ ಇಲ್ಲ. ಕಾಂಗ್ರೆಸ್‌ ಅತಿ ಹೆಚ್ಚು ನಿರ್ದೇಶಕರನ್ನ ಹೊಂದಿದೆ. ಯಾವುದೇ ಕಾರಣಕ್ಕೂ ಈ ಬಾರಿ ಕೆಎಂ ಎಫ್ ವಿಚಾರದಲ್ಲಿ ರಾಜೀ ಇಲ್ಲವೇ ಇಲ್ಲ ಎಂದರು.

ಹಾಗೆಯೇ ಕಂಪ್ಲಿ ಶಾಸಕ‌ ಜೆ ಎನ್ ಗಣೇಶ್  ಮಾತನಾಡಿ, ನಾನು ರಾಜೀನಾಮೆ ಕೊಡಲ್ಲ, ಪಕ್ಷದಲ್ಲೇ ಇರ್ತೀನಿ. ಬಿಜೆಪಿಯವ್ರು ನನ್ನನ್ನು ಸಂಪರ್ಕಿಸಿಲ್ಲ ಎಂದು ತಿಳಿಸಿದರು.

Key words: congress-MLA-Soumya Reddy -about – resignation