ಪೋಷಕರಿಗೆ ದೂರು ನೀಡಿದ್ದೇ ತಪ್ಪಾಯ್ತಾ..?  ಉಪನ್ಯಾಸಕನಿಗೆ  ಮಚ್ಚು ತೋರಸಿದ ವಿದ್ಯಾರ್ಥಿ.

ಮಂಡ್ಯ, ಆಗಸ್ಟ್ 25,2023(www.justkannada.in):  ಇತ್ತೀಚಿನ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆ ಬದಲಾಗಿದ್ದು,  ವಿದ್ಯಾರ್ಥಿಗಳಿಗೆ ಶಿಕ್ಷಕರು ಬೈಯುವಂತಿಲ್ಲ ಹೊಡೆಯುವಂತಿಲ್ಲ ಎಂಬ ನಿಯಮವಿದೆ. ಆದರೆ ಈ ನಿಯಮ ಕೆಲವು ಕಡೆಗಳಲ್ಲಿ ದುರುಪಯೋಗವಾಗುತ್ತಿದೆ. ಹೌದು, ಪೋಷಕರಿಗೆ ದೂರು ನೀಡಿದ್ದಕ್ಕೆ ಉಪನ್ಯಾಸಕರೊಬ್ಬರಿಗೆ ವಿದ್ಯಾರ್ಥಿ ಮಚ್ಚು ತೋರಿಸಿ ಎಚ್ಚರಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಿ.ಜಿ.ನಗರದ ಡಿಪ್ಲೊಮೋ ಕಾಲೇಜಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ತರಗತಿಗೆ ಬರುತ್ತಿಲ್ಲವೆಂದು ತನ್ನ ಬಗ್ಗೆ ಹೆತ್ತವರಿಗೆ ದೂರು ನೀಡಿದ್ದಕ್ಕೆ ವಿದ್ಯಾರ್ಥಿಯೊಬ್ಬ , ಉಪನ್ಯಾಸಕರಿಗೆ ಲಾಂಗ್ ತೋರಿಸಿ ದರ್ಪ ಮೆರೆದಿದ್ದಾನೆ.

ವಿದ್ಯಾರ್ಥಿ ಉದಯ್ ಗೌಡ (18) ಎಂಬ ವಿದ್ಯಾರ್ಥಿ  ನಾಗಮಂಗಲ ತಾಲೂಕಿನ ಬಿ.ಜಿ.ನಗರದ ಡಿಪ್ಲೊಮೋ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಈತ ಸರಿಯಾಗಿ ತರಗತಿಗೆ ಹಾಜರಾಗುತ್ತಿರಲಿಲ್ಲವಂತೆ.  ಹೀಗಾಗಿ ಉಪನ್ಯಾಸಕ ಚಂದನ್ ಎಂಬುವವರು ಉದಯ್​ ಕ್ಲಾಸ್​ಗೆ ಸರಿಯಾಗಿ ಬರುತ್ತಿಲ್ಲವೆಂದು ಆತನ ಪೋಷಕರಿಗೆ ದೂರು ನೀಡಿದ್ದರು. ಇದರಿಂದ ಕೋಪಗೊಂಡ ವಿದ್ಯಾರ್ಥಿ ಉದಯ್ ಗೌಡ ಈ  ರೀತಿ ಲಾಂಗ್ ತೋರಿಸಿ ದರ್ಪ ಮೆರೆದಿದ್ದಾನೆ ಎನ್ನಲಾಗಿದೆ.

Key words: complain – parents-student – wepean- lecturer