ನ್ಯೂಜಿಲ್ಯಾಂಡ್ ವಿರುದ್ಧ 2ನೇ ಟೆಸ್ಟ್’ನಲ್ಲೂ ಟೀಂ ಇಂಡಿಯಾ ಬ್ಯಾಟ್ಸ್’ಮನ್’ಗಳ ಪೆವಿಲಿಯನ್ ಪರೇಡ್

ಕ್ರೈಸ್ಟ್ ಚರ್ಚ್, ಫೆಬ್ರವರಿ 29, 2020 (www.justkannada.in): 2 ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 242 ರನ್ ಗಳಿಗೆ ಆಲೌಟ್ ಆಗಿದೆ.

ಥಿಮ್ ಸೌತಿ ನೇತೃತ್ವದ ನ್ಯೂಜಿಲೆಂಡ್ ಬೌಲರ್ ಗಳ ಶಿಸ್ತಿನ ದಾಳಿಗೆ ತತ್ತರಿಸಿರುವ ಭಾರತೀಯ ಬ್ಯಾಟ್ಸ್ ಮೆನ್ ಗಳು ಮತ್ತೊಮ್ಮೆ ಪೆವಿಲಿಯನ್ ಪರೇಡ್ ನಡೆಸಿದ್ದಾರೆ.

ಇನ್ನಿಂಗ್ಸ್ ಆರಂಭಿಸಿದ ಪೃಥ್ವಿ ಶಾ ಆಕರ್ಷಕ ಅರ್ಧಶತಕ ಬಾರಿಸಿದರೆ ಮಯಾಂಕ್ ಅಗರ್ ವಾಲ್ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಚೇತೇಶ್ವರ ಪೂಜಾರ 54 ರನ್ , ಹನುಮವಿಹಾರಿ 55 ರನ್ ಅರ್ಧಶತಕ ಬಾರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

ವಿರಾಟ್ ಕೊಹ್ಲಿ 3, ಅಜಿಂಕ್ಯಾ ರಹಾನೆ 7 ರನ್ ಗಳಿಸಿ ಔಟಾದರು. ನ್ಯೂಜಿಲೆಂಡ್ ಪರ ಥೀಮ್ ಸೌಥಿ (32 ಕ್ಕೆ 2), ಕೇಲ್ ಜೇಮ್ಸನ್ 5 ವಿಕೆಟ್ ಪಡೆದು ಮಿಂಚಿದರು.  ಇದೀಗ ಮಾಹಿತಿ ಪ್ರಕಾರ ನ್ಯೂಜಿಲ್ಯಾಂಡ್ ಮೊದಲ ಇನ್ನಿಂಗ್ಸ್ ವಿಕೆಟ್ ನಷ್ಟವಿಲ್ಲದೇ 63 ರನ್ ಗಳಿಸಿದೆ.