ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಬಿಡುಗಡೆ ಇನ್ನೂ ಲೇಟ್ !

ಹೈದರಾಬಾದ್, ಫೆಬ್ರವರಿ 29, 2020 (www.justkannada.in): ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಆರ್‌ಆರ್‌ಆರ್’ ಚಿತ್ರ ಬಿಡುಗಡೆಯನ್ನು ಹಾಲಿವುಡ್ ನಟನಿಗಾಗಿ ಮುಂದೂಡಲಾಗಿದೆ.

2018ರ ನವೆಂಬರಿನಲ್ಲಿ ಚಿತ್ರದ ಚಿತ್ರೀಕರಣ ಶುರುವಾಗಿದ್ದು, ಈ ವರ್ಷದ ಜುಲೈ ತಿಂಗಳ ಕೊನೆಯಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿತ್ತು.

ಆದರೆ ಇತ್ತೀಚೆಗಷ್ಟೇ ಚಿತ್ರತಂಡ ಈ ಚಿತ್ರವನ್ನು ಮುಂದಿನ ವರ್ಷ ಜನವರಿ 8ಕ್ಕೆ ಬಿಡುಗಡೆ ಮಾಡುವುದಾಗಿ ಟ್ವೀಟ್ ಮಾಡಿತ್ತು. ಆದರೆ ಕಾರಣ ತಿಳಿಸಿರಲಿಲ್ಲ. ಆದರೀಗ ಚಿತ್ರ ಮುಂದೂಡಿರುವ ಬಗ್ಗೆ ಕಾರಣ ರಿವೀಲ್ ಆಗಿದೆ.

ಆರ್‌ಆರ್‌ಆರ್ ಚಿತ್ರದಲ್ಲಿ ಜೂ. ಎನ್‍ಟಿಆರ್ ಹಾಗೂ ರಾಮ್‍ಚರಣ್ ಅವರ ಜೊತೆ ಹಾಲಿವುಡ್ ನಟ ಕೂಡ ನಟಿಸುತ್ತಿದ್ದಾರೆ. ಚಿತ್ರೀಕರಣದ ವೇಳೆ ಹಾಲಿವುಡ್ ನಟ ತೀವ್ರವಾಗಿ ಗಾಯಗೊಂಡಿದ್ದು, ದೀರ್ಘ ಸಮಯದ ವಿಶ್ರಾಂತಿಯಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.