ಸರ್ಕಾರಿ ಆಸ್ತಿ ಪರಭಾರೆ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇನೆ- ಮಾಜಿ ಸಿಎಂ ಹೆಚ್.ಡಿಕೆ ಹೊಸಬಾಂಬ್.

ಬೆಂಗಳೂರು,ಸೆಪ್ಟಂಬರ್,12,2022(www.justkannada.in):   ಸಾವಿರಾರು ಕೋಟಿ ಬೆಲೆಬಾಳುವ ಸರ್ಕಾರಿ ಆಸ್ತಿ ಪರಭಾರೆ ಮಾಡಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೊಸಬಾಂಬ್ ಸಿಡಿಸಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಬಿಜೆಪಿಯವರು ಭ್ರಷ್ಟಾಚಾರದ ದಾಖಲೆ ಕೊಡಿ ಎಂದು ಕೆಣಕಿದ್ದಾರೆ . ಸಾವಿರಾರು ಕೋಟಿ ಬೆಲೆಬಾಳು ಸರ್ಕಾರಿ ಆಸ್ತಿ ಪರಭಾರೆ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇನೆ. ಈ ವಿಚಾರವನ್ನ ಚರ್ಚೆ ಮಾಡಲು ಕಾಂಗ್ರೆಸ್ ಸಹಕರಿಸಬೇಕು.  ದಾಖಲೆ ಬಿಡುಗಡೆ ಸ್ಯಾಂಪಲ್ ಇದನ್ನ ಅರಗಿಸಿಕೊಳ್ಳಲಿ ಸಾಕು ಎಂದು ಹೇಳಿದರು.

ನೆರೆಹಾವಳಿಯಿಂದ ಹಾನಿಯಾದ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಬೇಕು.  40 ಪರ್ಸೆಂಟ್ ಕಮಿಷನ್ ಬಗ್ಗ ಚರ್ಚೆ ಮಾಡಬೇಕಾ. ಬೇಡ್ವಾ ನಿರ್ಧಿಷ್ಟ ದಾಖಲೆ ಇಟ್ಟುಕೊಂಡು ಚರ್ಚಿಸಿದರೇ ಮಹತ್ವ ಇರುತ್ತದೆ ಇಲ್ಲಿದ್ದರೇ ಸಂತೆ ಭಾಷಣ ಆಗುತ್ತೆ. ಈ ಬಗ್ಗೆ ನಮ್ಮ ಶಾಸಕರಿಗೆ ಸಲಹೆ ನೀಡಿದ್ದೇನೆ ಎಂದು ಹೆಚ್.ಡಿಕೆ ಹೇಳಿದರು.

Key words:  release –document-about-government-property-Former CM-HD kumaraswamy

ENGLISH SUMMARY..

Will release documents related to Govt. property expropriation: Former CM HDK
Bengaluru, September 12, 2022 (www.justkannada.in): “I will release documents pertaining to expropriation of government property worth thousands of crores,” observed former Chief Minister H.D. Kumaraswamy.
Addressing the press persons today, H.D. Kumaraswamy said, the BJP leaders have provoked me by asking documents against corruption charges. “I will soon release documents pertaining to expropriation of government property worth crores of rupees. Congress should cooperate in discussing this. Statement of releasing the documents is just a sample, if possible try to digest this,” he said.
“Loss occurred due to should be discussed in the cabinet session. Regarding discussion on the 40% commission, they should discuss by keeping all the documents, otherwise it will become insignificant. I have given my advice on this to my MLAs,” he observed.
Keywords: Former CM H.D. Kumaraswamy/ BJP/ expropriation of Govt. property/ documents release