Thursday, September 17, 2026

BDA Apartments

ಮತದಾನಕ್ಕೆಂದು ಬಂದು ವಾಪಸ್ ಹೋಗುವಾಗ ಅಪಘಾತ: ಯುವಕ ಸ್ಥಳದಲ್ಲೇ ಸಾವು… BDA JK_Adv BDA Adv
Home Crime ಮತದಾನಕ್ಕೆಂದು ಬಂದು ವಾಪಸ್ ಹೋಗುವಾಗ ಅಪಘಾತ: ಯುವಕ ಸ್ಥಳದಲ್ಲೇ ಸಾವು…..

ಮತದಾನಕ್ಕೆಂದು ಬಂದು ವಾಪಸ್ ಹೋಗುವಾಗ ಅಪಘಾತ: ಯುವಕ ಸ್ಥಳದಲ್ಲೇ ಸಾವು…..

ಮಂಡ್ಯ,ಡಿ,7,2019(www.justkannada.in): ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ  ಸಂಭವಿಸಿದ ಪರಿಣಾಮ ಮತದಾನಕ್ಕೆಂದು ಬಂದಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ನಡೆದಿದೆ.

ನಾಗಮಂಗಲ ತಾಲೂಕಿನ ಬೋಗಾದಿ ಬಳಿಯ ಕೆ.ಆರ್.ಪೇಟೆ- ನಾಗಮಂಗಲ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕೆ.ಆರ್.ಪೇಟೆ ತಾಲೂಕಿನ ಕೈಗೋನಹಳ್ಳಿ ಗ್ರಾಮದ ನರಸಿಂಹರಾಜು(31) ಮೃತಪಟ್ಟ ಯುವಕ. ಘಟನೆಯಲ್ಲಿ ದೊರೆಸ್ವಾಮಿ‌ ಮತ್ತು  ರಾಮೇಗೌಡ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತ ನರಸಿಂಹರಾಜು  ಮತ್ತು ಗಾಯಗೊಂಡಿರುವ‌ ದೊರೆಸ್ವಾಮಿ ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದರು. ಮೊನ್ನೆ ನಡೆದ ಉಪ ಚುನಾವಣೆಯಲ್ಲಿ ಮತ ಚಲಾಯಿಸಲು ಇಬ್ಬರು ಬೈಕಿನಲ್ಲಿ ಊರಿಗೆ ಬಂದಿದ್ರು. ಮತದಾನ ಮುಗಿಸಿ ವಾಪಸ್ಸು ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಈ ಕುರಿತು ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ‌ ದಾಖಲಾಗಿದೆ.

Key words:  collision – two bikes- Youth –dies-on the spot-by election- voting