Thursday, October 15, 2026

Dasara Wishes

Strengthening DasraWishes_JK DasraWishes JK
Happy Dasara
Home Front Page ಹಿಜಾಬ್ ಕುರಿತ ಸಿಎಂ ಸಿದ್ದರಾಮಯ್ಯ ಹೇಳಿಕೆ ರಾಜಕೀಯ ಪ್ರೇರಿತ- ಮಾಜಿ ಸಚಿವ ಅಶ್ವಥ್ ನಾರಾಯಣ್.

ಹಿಜಾಬ್ ಕುರಿತ ಸಿಎಂ ಸಿದ್ದರಾಮಯ್ಯ ಹೇಳಿಕೆ ರಾಜಕೀಯ ಪ್ರೇರಿತ- ಮಾಜಿ ಸಚಿವ ಅಶ್ವಥ್ ನಾರಾಯಣ್.

ಬೆಂಗಳೂರು,ಡಿಸೆಂಬರ್,25,2023(www.justkannada.in): ಹಿಜಾಬ್ ನಿಷೇಧ ವಾಪಸ್ ತೆಗೆದುಕೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ರಾಜಕೀಯ ಪ್ರೇರಿತವಾದುದು ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ್ ಕಿಡಿಕಾರಿದರು.

ಈ ಕುರಿತು ಇಂದು ಮಾತನಾಡಿದ  ಶಾಸಕ ಅಶ್ವಥ್ ನಾರಾಯಣ್, ಹಿಜಾಬ್ ವಿಚಾರವಾಗಿ ಸಿಎಂ ರಾಜಕೀಯ ಪ್ರೇರಿತ ಹೇಳಿಕೆ ನೀಡಿದ್ದಾರೆ.  ಶಾಲೆಗಳಲ್ಲಿ ಎಲ್ಲರೂ ಒಂದೇ ರೀತಿಯ  ಸಮವಸ್ತ್ರ  ಧರಿಸಬೇಕು. ವಿಭಜನೆ ಮಾಡುವ ದೃಷ್ಠಿಯಲ್ಲಿ ಸಮವಸ್ತ್ರ ನೀತಿ ಜಾರಿ ಮಾಡಲಿಲ್ಲ.  ಕಾನೂನಿನ ಪ್ರಕಾರವೇ ಸಮವಸ್ತ್ರ ನೀತಿ ಜಾರಿ ಮಾಡಲಾಗಿತ್ತು. ಸದ್ಯ ಹಿಜಾಬ್ ವಿಚಾರ ಸುಪ್ರೀಂಕೋರ್ಟ್  ನಲ್ಲಿದೆ. ಆದರೆ  ಸಿಎಂ ಸಿದ್ದಾರಾಮಯ್ಯ ಗೊಂದಲವನ್ನುಂಟು ಮಾಡಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ.  ಸಮಸ್ಯೆ ನಿವಾರಿಸಬೇಕಾದವರೇ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರೈತರ ಬಗ್ಗೆ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅಶ್ವಥ್ ನಾರಾಯಣ್, ಮಾನಸಿಕವಾಗಿ ದುರಂಹಕಾರದ ಮಾತುಗಳನ್ನಾಡಿದ್ದಾರೆ.  ಪ್ರಕೃತಿ ಪೂಜೆ ಮಾಡುವ ರೈತರು ಪ್ರಕೃತಿ ವಿಕೋಪ ಬರಲಿ ಎಂದು ಬಯಸಲ್ಲ.ಶಿವಾನಂದ ಪಾಟೀಲ್ ಅವರಿಗೆ ಮಾನಸಿಕ ಅಸ್ವಸ್ಥತೆ, ಬುದ್ದಿ ಭ್ರಮಣೆಯಾಗಿದೆಯೋ ಗೊತ್ತಿಲ್ಲ. ಅವರು ರೈತರ ಕ್ಷಮೆಯಾಚಿಸಲಿ ಎಂದು ಆಗ್ರಹಿಸಿದರು.

Key words: CM Siddaramaiah- statement – Hijab – politically motivated- Ashwath Narayan.