ಹನುಮ ಜಯಂತಿ ಪ್ರಸಾದ ಸೇವಿಸಿ ಅಸ್ವಸ್ಥರಾಗಿದ್ದ ಮಹಿಳೆ ಸಾವು: 15 ಜನರ ಸ್ಥಿತಿ ಗಂಭೀರ.

ಬೆಂಗಳೂರು,ಡಿಸೆಂಬರ್,25,2023(www.justkannada.in): ಹನುಮ ಜಯಂತಿ ಪ್ರಸಾದ ಸೇವಿಸಿ ಅಸ್ವಸ್ಥರಾಗಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಹೊಸಕೋಟೆಯಲ್ಲಿ ನಡೆದಿದೆ.

ಹೊಸಕೋಟೆಯ ಕಾವೇರಿ ನಗರದ ನಿವಾಸಿ ಸಿದ್ದಗಂಗಮ್ಮ(60) ಮೃತಪಟ್ಟವರು. ಪತಿ ತಂದು ಕೊಟ್ಟಿದ್ದ ಹನುಮ ಜಯಂತಿ ಪ್ರಸಾದ ಸೇವಿಸಿದ್ದ ಪತ್ನಿ ಸಿದ್ದಗಂಗಮ್ಮಗೆ ವಾಂತಿ ಭೇದಿಯಾಗಿದ್ದು ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಇನ್ನು ಪ್ರಸಾದ ಸೇವಿಸಿದ 15ಕ್ಕೂ ಜನರ ಸ್ಥಿತಿ ಗಂಭೀರವಾಗಿದ್ದು ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ. ಸ್ಥಳಕ್ಕೆ ಹೊಸಕೋಟೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words:  Woman –dies-after -Hanuma Jayanti- Prasada-bangalore