ಸಿಎಂ ಸಿದ್ದರಾಮಯ್ಯ ಯಾರ ಮುಲಾಜಿಗೂ ಒಳಗಾಗದೆ ಜಾತಿ ಗಣತಿ ವರದಿ ಬಿಡುಗಡೆ ಮಾಡಲಿ- ಹೆಚ್.ವಿಶ್ವನಾಥ್ ಆಗ್ರಹ.

ಮೈಸೂರು,ಡಿಸೆಂಬರ್,25,2023(www.justkannada.in): ಸಿಎಂ ಸಿದ್ದರಾಮಯ್ಯ ಯಾರ ಮುಲಾಜಿಗೂ ಒಳಗಾಗದೆ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಲಿ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ  ಹೆಚ್.ವಿಶ್ವನಾಥ್ ಆಗ್ರಹಿಸಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ವಿಶ್ವನಾಥ್,  ಜಾತಿ ಗಣತಿ ವರದಿ ಬಿಡುಗಡೆಗೆ ವೀರಶೈವ ಲಿಂಗಾಯತ ಸಮುದಾಯ ಏಕೆ ವಿರೋಧ ಮಾಡುತ್ತಿದೆ ಗೊತ್ತಾಗುತ್ತಿಲ್ಲ. ಮೊದಲು ವರದಿಯನ್ನು ಬಿಡುಗಡೆ ಆಗಲಿ. ಅಲ್ಲಿ ಏನಿದೆ ಅಂತ ಚರ್ಚೆ ಆಗಲಿ. ವರದಿ ನೋಡದೇ, ತಿಳಿಯದೇ ಸುಮ್ಮನೇ  ಆರಂಭದಲ್ಲೇ ವಿರೋಧ ಮಾಡುವುದು ಸರಿಯಲ್ಲ ಎಂದರು.

ಇದೇ  ರೀತಿ ಅಂದು ಹಾವನೂರು ಆಯೋಗದ ವರದಿಯನ್ನು ಕೂಡ ಸಾಕಷ್ಟು ವಿರೋಧ ಮಾಡಿದರು. ಆದರೆ ಅಂದಿನ ಸಿಎಂ ದೇವರಾಜ ಅರಸು ಎಲ್ಲರ ವಿರೋಧದ ನಡುವೆಯೇ ಹಾವನೂರು ವರದಿ ಬಿಡುಗಡೆ ಮಾಡಿದರು. ಈಗಲೂ ಸಿಎಂ ಸಿದ್ದರಾಮಯ್ಯ ಈ ವರದಿಯನ್ನು ಬಿಡುಗಡೆ ಮಾಡಬೇಕು. ಯಾರ ಮುಲಾಜಿಗೂ ಒಳಗಾಗಬಾರದು. ವರದಿ ಬಂದ ಬಳಿಕ ಚರ್ಚೆ ನಡೆಯಲಿ ಏನು ಇದೆ, ಏನಿಲ್ಲ ಅನ್ನೋದನ್ನ ಅಮೇಲೆ ಚರ್ಚೆ ಮಾಡಲಿ. ಸುಮ್ಮನೇ ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು  ಹೆಚ್. ವಿಶ್ವನಾಥ್ ಹೇಳಿದರು.

Key words:  CM Siddaramaiah-release – caste census report – H. Vishwanath