Thursday, September 17, 2026

BDA Apartments

ಸರ್ಕಾರಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ : ಗುತ್ತಿಗೆದಾರನ ವಿರುದ...
Home Crime ಸರ್ಕಾರಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ : ಗುತ್ತಿಗೆದಾರನ ವಿರುದ್ದ ದೂರು ದಾಖಲು

ಸರ್ಕಾರಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ : ಗುತ್ತಿಗೆದಾರನ ವಿರುದ್ದ ದೂರು ದಾಖಲು

 ಶಿವಮೊಗ್ಗ,ಜೂನ್,13,2026 (www.justkannada.in):   ಸರ್ಕಾರಿ ನೌಕರಿಯಲ್ಲಿರುವ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಗುತ್ತಿಗೆದಾರನ ವಿರುದ್ದ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಗರ ನಗರಸಭೆ ಗುತ್ತಿಗೆಆರ ನಾಗರಾಜ್ ವಿರುದ್ದ ಕೇಸ್ ದಾಖಲಾಗಿದೆ. ಸರ್ಕಾರಿ ನೌಕರಿಯಲ್ಲಿರುವ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ  ನೀಡಿ ಜೀವ ಬೆದರಿಕೆ ಹಾಕಿದ ಆರೋಪದಡಿ  ಪ್ರಕರಣ ದಾಖಲಾಗಿದೆ.ಸರ್ಕಾರಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ jk02_new jk02 new

2023 ರಿಂದ 2026 ಜೂನ್ 8ರ ಅವಧಿಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದು, ಸಾಗರ ನಗರಸಭೆ ಕಚೇರಿಯ ಆವರಣದಲ್ಲಿ ಅಸಭ್ಯ ವರ್ತನೆ ತೋರಿದ  ಆರೋಪ ಕೇಳಿ ಬಂದಿದೆ.  ನಿನ್ನ ಗಂಡ ಕುಡುಕ. ನನ್ನ ಜೊತೆ  ಲೈಂಗಿಕವಾಗಿ ಸಹಕರಿಸಿದರೆ ನಿನಗೆ ಅಭರಣ ಕೊಡಿಸುವೆ.  ಕೇಳಿದಷ್ಟು ಹಣ ಕೊಡಿತ್ತೇನೆ ಎಂದು ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಅಲ್ಲದೆ ಮಹಿಳೆಯ ಮಹಿಳೆಯನ್ನು ಹಿಂಬಾಲಿಸಿ  ದೈಹಿಕ ಮಾನಸಿಕ ಕಿರುಕುಳ ನೀಡುತ್ತಿದ್ದ ಆರೋಪ ಮಾಡಲಾಗಿದೆ. ಎಫ್ ಐಆರ್ ದಾಖಲಾಗುತ್ತಿದ್ದಂತೆ ನಾಗರಾಜು ತಲೆಮರಿಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.ಗುತ್ತಿಗೆದಾರನ ವಿರುದ್ದ ದೂರು ದಾಖಲು BDA JK_Adv BDA Adv

Key words: Government employee, sexual harassment, Complaint, contractor