ಡಿಸೆಂಬರ್ ನೊಳಗೆ GBA ಜೊತೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನೂ ನಡೆಸುತ್ತೇವೆ-ಸಿಎಂ ಡಿಕೆ ಶಿವಕುಮಾರ್

ನವದೆಹಲಿ,ಜುಲೈ,17,2026 (www.justkannada.in):  ಸುಪ್ರೀಂಕೋರ್ಟ್ ನಮ್ಮ ಮನವಿಯನ್ನು ಪುರಸ್ಕರಿಸಿದ್ದು ಡಿಸೆಂಬರ್ ನೊಳಗೆ ಜಿಬಿಎ ಚುನಾವಣೆಯನ್ನ ನಡೆಸುತ್ತೇವೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಸುಪ್ರೀಕೋರ್ಟ್ ಜಿಬಿಎ ಚುನಾವಣೆಗೆ ಮತ್ತೆ ಕಾಲಾವಕಾಶ ವಿಸ್ತರಣೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್,  ಡಿಸೆಂಬರ್ 31ರೊಳಗೆ ಜಿಬಿಎ ಚುನಾವಣೆ ಮುಗಿಸುತ್ತೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯ‍ನ್ನೂ ಮುಗಿಸುತ್ತೇವೆ. ಡಿಸೆಂಬರ್ ಬಳಿಕ ಯಾವ ಅವಕಾಶವನ್ನ ಕೇಳಲ್ಲ  ಸುಪ್ರೀಂ ಕೋರ್ಟ್ ಕೊಟ್ಟ ಸಮಯವನ್ನ ಸರ್ಕಾರ ಗೌರವಿಸುತ್ತದೆ ಎಂದರು.

ಎಸ್ ಐಆರ್ ನಡೆಯುತ್ತಿದ್ದರಿಂದ ಸಮಯ ಕೇಳಿದ್ದವು. ಗ್ರಾಮ ಪಂಚಾಯತಿಗಳಲ್ಲಿಅಧಿಕಾರಿಗಳ ಆಡಳಿತ ಸರಿಯಲ್ಲ  ಜಿಬಿಎ ಜೊತೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡಬೇಕಿದೆ. ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಶೀಘ್ರದಲ್ಲೇ ಚುನಾವಣೆ ನಡೆಸುತ್ತೇವೆ. ಬಿಡದಿ ವಿಚಾರದಲ್ಲಿ ಬಿಜೆಪಿ, ಜೆಡಿಎಸ್ ಪ್ರತಿಭಟನೆ ಬಗ್ಗೆ ಮಾತಾಡಲ್ಲ ಎಂದರು.

Key words: local body, GBA, elections, December, CM, DK Shivakumar