ಬೆಂಗಳೂರು,ಜುಲೈ,17,2026 (www.justkannada.in): ರೈತರ ವಿರೋಧದ ನಡುವೆಯೂ ಬಿಡದಿ ಟೌನ್ ಶಿಪ್ ನಿರ್ಮಾಣಕ್ಕೆ ಭೂಸ್ವಾಧೀನಕ್ಕೆ ನೋಟಿಫೀಕೇಷನ್ ಹೊರಡಿಸಿದ್ದಾರೆ. ರಾಜ್ಯದಲ್ಲಿರೋದು ಈಗ ಲ್ಯಾಂಡ್ ಮಾಫಿಯಾ ಸರ್ಕಾರ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.
ಬಿಡದಿ ಟೌನ್ ಶಿಪ್ ವಿರೋಧಿಸಿ ನಡೆಸಿದ ಬಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಹಿಂದೆ ಲಾಬಿ ಮಾಫಿಯಾ ಸರ್ಕಾರವನ್ನು ನಡೆಸುತ್ತಿತ್ತು ಈಗ ರಾಜ್ಯದಲ್ಲಿ ಲ್ಯಾಂಡ್ ಮಾಫಿಯಾ ಸರ್ಕಾರವನ್ನ ನಡೆಸುತ್ತಿದೆ. ಅಣ್ಣ, ತಮ್ಮ ಇಬ್ಬರಿಗೂ ಫಲವತ್ತಾದ ಭೂಮಿಯೇ ಬೇಕು ಎಂದು ಕಿಡಿಕಾರಿದರು.
ರೈತರು ಭೂಮಿ ಕೊಡಲ್ಲ ಅಂದರೂ ಫೈನಲ್ ನೋಟಿಫೀಕೇಷನ್ ಆಗಿದೆ. ಭೂಮಿ ವಿವಾದ ಇದ್ದರೆ ಪರಿಹಾರ ಕೂಡ ಸಿಗಲ್ಲ . ರೇಷ್ಮೆ ಮಾವು ಹೈನುಗಾರಿಕೆಯ ಪ್ರದೇಶ ಕಿತ್ತುಕೊಳ್ಳಲು ಹೊರಟಿದೆ. ಲ್ಯಾಂಡ್ ಮಾಫಿಯಾ ಜಮೀನನ್ನು ಕಿತ್ತುಕೊಳ್ಳಲು ನಾವು ಬಿಡಲ್ಲ ಎಂದು ಶೋಭಾ ಕರಂದ್ಲಾಜೆ ಹರಿಹಾಯ್ದರು.
Key words: land mafia, government, Union Minister, Shobha Karandlaje







