Monday, September 28, 2026

BDA Apartments

ಮತಪಟ್ಟಿಯಲ್ಲಿ ಹೆಸರು ಡಿಲಿಟ್ ಆದ್ರೆ ಗ್ಯಾರಂಟಿಗಳು ಸಿಗಲ್ಲ- SIR ಪ್ರಕ್ರಿಯೆ ಬ...
Home Front Page ಮತಪಟ್ಟಿಯಲ್ಲಿ ಹೆಸರು ಡಿಲಿಟ್ ಆದ್ರೆ ಗ್ಯಾರಂಟಿಗಳು ಸಿಗಲ್ಲ- SIR ಪ್ರಕ್ರಿಯೆ ಬಳಿಕ ಸಿಎಂ ಡಿಕೆಶಿ ಹೇಳಿಕೆ

ಮತಪಟ್ಟಿಯಲ್ಲಿ ಹೆಸರು ಡಿಲಿಟ್ ಆದ್ರೆ ಗ್ಯಾರಂಟಿಗಳು ಸಿಗಲ್ಲ- SIR ಪ್ರಕ್ರಿಯೆ ಬಳಿಕ ಸಿಎಂ ಡಿಕೆಶಿ ಹೇಳಿಕೆ

ಬೆಂಗಳೂರು,ಜೂನ್,30,2026 (www.justkannada.in):  ಮತಪಟ್ಟಿಯಲ್ಲಿ ಹೆಸರು ಡಿಲಿಟ್ ಆದರೆ ಗ್ಯಾರಂಟಿಗಳು ಸಿಗಲ್ಲ ಎಂದು ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.

ಇಂದಿನಿಂದ ರಾಜ್ಯಾದ್ಯಂತ ಎಸ್ ಐಆರ್ ಪ್ರಕ್ರಿಯೆಗಳು ಶುರುವಾಗಿದ್ದು ಇಂದು ಹಿರಿಯ ಅಧಿಕಾರಿಗಳು ಸದಾಶಿವನಗರದ ಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ ಎಸ್ ಐಆರ್ ಪ್ರಕ್ರಿಯೆ ನಡೆಸಿದರು. ಈ ವೇಳೆ ಸಿಎಂ ಡಿಕೆಶಿ  ಅವರು ಬಿಎಲ್ ಒ ಅಧಿಕಾರಿಗಳಿಗೆ ಹಲವು ಪ್ರಶ್ನೆಗಳನ್ನಾಕಿ ಉತ್ತರ ಪಡೆದರು. ಮತಪಟ್ಟಿಯಲ್ಲಿ ಹೆಸರು ಡಿಲಿಟ್ ಆದ್ರೆ ಗ್ಯಾರಂಟಿಗಳು ಸಿಗಲ್ಲ dks dks 10

ಎಸ್ ಐಆರ್ ಪ್ರಕ್ರಿಯೆ ಬಳಿಕ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಮತಪಟ್ಟಿಯಲ್ಲಿ ಹೆಸರು ಡಿಲಿಟ್ ಆದರೆ ಗ್ಯಾರಂಟಿ ಯೋಜನೆಗಳು ಬಂದ್ ಆಗಲಿವೆ.  ಮತದಾರ ಅಲ್ಲದಿದ್ರೆ ಗ್ಯಾರಂಟಿ ಯಾಕೆ ಕೊಡಬೇಕು ಬೇರೆ ಕಡೆ ಮತದಾನ ಮಾಡೋರಿಗೆ ಗ್ಯಾರಂಟಿ ಯಾಕೆ? ಬೇರೆ ಕಡೆಯೆಲ್ಲಾ ಗ್ಯಾರಂಟಿ ಯೋಜನೆ ಕೊಡುತ್ತಿಲ್ಲ   ಬಿಹಾರ ಪ.ಬಂಗಾಳದಲ್ಲಿ ಗ್ಯಾರಂಟಿ ನಿಲ್ಲಿಸಿದ್ದಾರೆ ಎಂದರು.SIR ಪ್ರಕ್ರಿಯೆ ಬಳಿಕ ಸಿಎಂ ಡಿಕೆಶಿ ಹೇಳಿಕೆ jk02_new jk02 new

ಮತಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೇ ನಾವು ಯಾಕೆ ಗ್ಯಾರಂಟಿ ಕೊಡಬೇಕು? ಹೀಗಾಗಿ ಎಲ್ಲರೂ ಮತಪಟ್ಟಿಯಲ್ಲಿ ತಮ್ಮ ಹೆಸರು ಇರುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.

Key words: voter list, guarantees, SIR, CM DK Shivakumar