Tuesday, September 29, 2026

BDA Apartments

ಗಿಡ ನೆಡುವುದರಲ್ಲೂ ಹಣ ಕೊಳ್ಳೇ ಹೊಡೆದಿದ್ದೀರಾ? GBA ಅಧಿಕಾರಿಗಳಿಗೆ ಸಚಿವ ಕೃಷ್...
Home Front Page ಗಿಡ ನೆಡುವುದರಲ್ಲೂ ಹಣ ಕೊಳ್ಳೇ ಹೊಡೆದಿದ್ದೀರಾ? GBA ಅಧಿಕಾರಿಗಳಿಗೆ ಸಚಿವ ಕೃಷ್ಣಭೈರೇಗೌಡ ತರಾಟೆ

ಗಿಡ ನೆಡುವುದರಲ್ಲೂ ಹಣ ಕೊಳ್ಳೇ ಹೊಡೆದಿದ್ದೀರಾ? GBA ಅಧಿಕಾರಿಗಳಿಗೆ ಸಚಿವ ಕೃಷ್ಣಭೈರೇಗೌಡ ತರಾಟೆ

ಬೆಂಗಳೂರು, ಜೂನ್,30,2026 (www.justkannada.in):   ವಿವಿಧ ಅಭಿವೃದ್ದಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ವೇಳೆ ಬೆಂಗಳೂರು ನಗರಾಭಿವೃದ್ದಿ ಸಚಿವ ಕೃಷ್ಣಭೈರೇಗೌಡ ಅವರು ಜಿಬಿಎ ಅಧಿಕಾರಿಗಳಿಗೆ ಬೆವರಿಳಿಸಿದ್ದಾರೆ.

ಇಂದು ಸಭೆಯಲ್ಲಿ ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡ ಸಚಿವ ಕೃಷ್ಣಭೈರೇಗೌಡರು, ಗಿಡ ನೆಡುವುದರಲ್ಲೂ ಹಣ ಕೊಳ್ಳೇ ಹೊಡೆದಿದ್ದೀರಾ? ನಾನು ಚಾಲೆಂಜ್ ಮಾಡಿ ಹೇಳುತ್ತಿದ್ದೇನೆ.  ಗಿಡ ನೆಡಸುವ ವಿಚಾರದಲ್ಲಿ ನನ್ನ ಕ್ಷೇತ್ರದಲ್ಲಿ ಹಣ ಲೂಟಿ ಆಗಿದೆ. ಒಂದು ಗಿಡ ನೆಡುವುದಕ್ಕೆ 3,300 ರೂಪಾಯಿ ಖರ್ಚು ಆಗುತ್ತೆ.  ಗಿಡ ನೆಡಲು ಮಣ್ಣು ತೆಗೆಯೋಕೆ 300 ರೂ ಖರ್ಚು ಆಗುತ್ತೆ. ನನ್ನ ಕ್ಷೇತ್ರದಲ್ಲಿ ಸರಿಯಾಗಿ ಗುಂಡಿ ತೋಡಿ ಗಿಡ ನೆಟ್ಟಿಲ್ಲ ನನ್ನ ಹೇಳಿಕೆ ತಪ್ಪಾಗಿದ್ದರೇ ನನ್ನ ಕರೆದುಕೊಂಡು ಹೋಗಿ ತೋರಿಸುವೆ ಎಂದು ಜಿಬಿಎ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.ಗಿಡ ನೆಡುವುದರಲ್ಲೂ ಹಣ ಕೊಳ್ಳೇ ಹೊಡೆದಿದ್ದೀರಾ? GBA ಅಧಿಕಾರಿಗಳಿಗೆ ಸಚಿವ ಕೃಷ್...

ಜಿಬಿಎ ವ್ಯಾಪ್ತಿಯಲ್ಲಿನ ಪಶುಸಂಗೋಪನೆ ಇಲಾಖೆ ಕುರಿತು ಸಭೆ ನಡೆಸಿದ ಸಚಿವ ಕೃಷ್ಣ ಭೈರೇಗೌಡರು, ನಾಯಿಗಳ ಸಂತಾನಹರಣ ಕಾರ್ಯಕ್ರಮ ಯಾವಾಗಿಂದ ಚಾಲ್ತಿಯಲ್ಲಿದೆ? .  ಇಷ್ಟು ದಿನ ಎಷ್ಟು ನಾಯಿಗಳಿಗೆ ಸಂತಾನಹರಣ ಮಾಡಿದ್ದೀರಿ?  ಆದರೂ ನಾಯಿಗಳ ಸಂಖ್ಯೆ ಹೆಚ್ಚುತ್ತಿರಲು ಕಾರಣವೇನು? ಎಂದು ಸಭೆಯಲ್ಲಿ ಪ್ರಶ್ನಿಸಿ ಮಾಹಿತಿ ಪಡೆದರು.justkannada jk02_new jk02 new

Key words: planting, trees, Minister, Krishna Bhairegowda, GBA officers