ದಕ್ಷಿಣ ಭಾರತದಲ್ಲೇ ಕರೋನಾ ಮುಕ್ತ ಕೀರ್ತಿಗೆ ಚಾಮರಾಜನಗರ ಜಿಲ್ಲೆ. ಇದಕ್ಕೇನು ಕಾರಣ ಗೊತ್ತ..?

 

ಮೈಸೂರು, ಜೂ.03, 2020 : (www.justkannada.in news) : ರಾಜ್ಯದ ಗಡಿ ಜಿಲ್ಲೆಗಳ ಪೈಕಿ ಹಿಂದುಳಿದ, ಶಾಪಗ್ರಸ್ತ ಜಿಲ್ಲೆಯೆಂಬ ಹಣೆಪಟ್ಟಿ ಪಡೆದಿದ್ದ ಚಾಮರಾಜನಗರ ಜಿಲ್ಲೆ ಇದೀಗ ಟೀಕಾಕಾರರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.

ದಕ್ಷಿಣ ಭಾರತದಲ್ಲೇ ಕರೋನಾ ಮುಕ್ತ ಜಿಲ್ಲೆ ಎಂಬ ಕೀರ್ತಿಗೆ ಗಡಿಜಿಲ್ಲೆ ಚಾಮರಾಜನಗರ ಪಾತ್ರವಾಗಿದೆ. ಈತನಕ ಒಂದೇ ಒಂದು ಕೋವಿಡ್ 19 ಪ್ರಕರಣ ದಾಖಲಾಗದೆ ರಾಜ್ಯದ ಗಮನ ಸೆಳೆದಿದ್ದ ಚಾಮರಾಜನಗರ ಜಿಲ್ಲೆ, ಇದೀಗ ದಕ್ಷಿಣ ಭಾರತದಲ್ಲೇ ಕರೋನಾ ಮುಕ್ತ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅತೀ ಹೆಚ್ಚು ಕರೋನಾ ಸೋಂಕಿತರನ್ನು ಹೊಂದಿರುವ ತಮಿಳುನಾಡು, ಕೇರಳ ಗಡಿಗಳಲ್ಲೇ ಚಾಮರಾಜನಗರ ಜಿಲ್ಲೆಯಿದೆ. ಆದರೂ ಈ ತನಕ ಕೋವಿಡ್ 19 ಈ ಜಿಲ್ಲೆಯ ಸಮೀಪಕ್ಕೂ ಸುಳಿಯಲಾಗಿಲ್ಲ. ಆ ಮೂಲಕ ಚಾಮರಾಜನಗರ ಕರೋನಾ ಮುಕ್ತ ಜಿಲ್ಲೆಯೆಂಬ ಕೀರ್ತಿಗೆ ಕಾರಣವಾಗಿದೆ.

chamarajanagara-corona-free-district-in-south-India-stunning-reason-behind-this

ಏನು ಕಾರಣ :

ಕೋವಿಡ್ 19 ಭೀತಿ ಆರಂಭದಲ್ಲೇ ಚಾಮರಾಜನಗರದ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಯಿತು. ಅದರಲ್ಲೂ ಸಮೀಪದ ಜಿಲ್ಲೆ ಹಾಗೂ ರಾಜ್ಯದ ಪ್ರವೇಶ ದ್ವಾರಗಳಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಯಿತು. ಪರಿಣಾಮ ಹೊರ ರಾಜ್ಯದ ಹಾಗೂ ಜಿಲ್ಲೆಗಳ ವ್ಯಕ್ತಿಗಳ ಪ್ರವೇಶ ಸಂಪೂರ್ಣವಾಗಿ ನಿರ್ಬಂಧಿಸಲಾಯಿತು.

ಪೊಲೀಸರು ಎಷ್ಟು ಕಟ್ಟುನಿಟ್ಟಾಗಿದ್ದರು ಅಂದ್ರೆ ಪಾಸ್ ಹೊಂದಿರುವವರು ಸಹ ಅನಗತ್ಯವಾಗಿ ಓಡಾಡಲು ತಿಣುಕಾಡುವಂತಾಗಿ, ಚಾಮರಾಜನಗರ ಜಿಲ್ಲೆ ಪ್ರವೇಶಿಸುವುದು ಒಂದೇ ಭಾರತ-ಪಾಕಿಸ್ತಾನ ಗಡಿ ದಾಟುವುದು ಒಂದೇ. ಈ ಸಹವಾಸವೇ ಬೇಡ ಎನ್ನುವಂತಾಗಿತ್ತು. ಇದು ಜಿಲ್ಲೆಯಲ್ಲಿ ಕೋವಿಡ್ ಹರಡುವಿಕೆಗೆ ಅತಿ ದೊಡ್ಡ ತಡೆಗೋಡೆಯಂತಾಯಿತು.

chamarajanagara-corona-free-district-in-south-India-stunning-reason-behind-this

ದೈವ ಬಲ :

ಲಾಕ್ ಡೌನ್ ವೇಳೆಯಲ್ಲಿ ಕೆಲ ವಿಡಿಯೋಗಳು ವೈರಲ್ ಆದವು. ಈ ಪೈಕಿ, ಚಾಮರಾಜನಗರ ಜಿಲ್ಲೆಗೆ ಕರೋನಾ ವೈರಸ್ ಯಾಕೆ ಕಾಲಿಡಲ್ಲ ಎನ್ನುವ ಸ್ಥಳೀಕರ ವಿಡಿಯೋ ಸಹ ವೈರಲ್ ಆಯ್ತು.

ಈ ಪ್ರಕಾರ, ಚಾಮರಾಜನಗರ ಜಿಲ್ಲೆ ಸಂಪೂರ್ಣವಾಗಿ ದೇವಾನುದೇವತೆಗಳ ರಕ್ಷಣೆಯಲ್ಲಿದೆ. ಒಂದು ಕಡೆ ಏಳು ಮಲೇ, ಎಪ್ಪತೇಳು ಮಲೇ ಬಳಿ ನೆಲಸಿರುವ ಮಲೈ ಮಹಾದೇಶ್ವರ, ಮತ್ತೊಂದೆಡೆ ಬಿಳಿಗಿರಿ ರಂಗನಾಥ, ಇನ್ನೊಂದೆಡೆ ಹಿಮದ ಗೋಪಾಲಸ್ವಾಮಿ, ಮಂಟೇಸ್ವಾಮಿ, ಚಾಮರಾಜೇಶ್ವರಿ ಹಾಗೂ ಮಾರಿ ಮಸಣಿಗಳು ಜಿಲ್ಲೆಯಲ್ಲಿ ಹೆಚ್ಚು ಆರಾಧಿಸುವ ದೇವಾನುದೇವತೆಗಳು. ಇವರ ಶ್ರೀರಕ್ಷೆಯಿಂದ ಜಿಲ್ಲೆಗೆ ಯಾವುದೇ ವೈರಸ್ ದಾಳಿ ಮಾಡದು ಎಂದು ಚಾಮರಾಜನಗರದ ಸ್ಥಳೀಯರು ನೀಡಿದ್ದ ಹೇಳಿಕೆಯ ವಿಡಿಯೋ ಆಗ ವೈರಲ್ ಆಗಿತ್ತು.
ಈಗ ಅದು ನಿಜವಾಗಿದೆ. ಆಮೂಲಕ ದಕ್ಷಿಣ ಭಾರತದಲ್ಲೇ ಕರೋನಾ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ooooo

key words : chamarajanagara-corona-free-district-in-south-India-stunning-reason-behind-this