Wednesday, August 5, 2026

BDA Apartments

Home Crime ಪಾದರಾಯನಪುರ  ಗಲಾಟೆ ಪ್ರಕರಣ: ಬಿಡುಗಡೆಯಾದ  126 ಆರೋಪಿಗಳನ್ನ ಸ್ವಾಗತಿಸಿದ ಶಾಸಕ ಜಮೀರ್ ಅಹ್ಮದ್ ಖಾನ್…

ಪಾದರಾಯನಪುರ  ಗಲಾಟೆ ಪ್ರಕರಣ: ಬಿಡುಗಡೆಯಾದ  126 ಆರೋಪಿಗಳನ್ನ ಸ್ವಾಗತಿಸಿದ ಶಾಸಕ ಜಮೀರ್ ಅಹ್ಮದ್ ಖಾನ್…

ಬೆಂಗಳೂರು,ಜೂ,3,2020(www.justkannada.in): ಪಾದರಾಯನಪುರದಲ್ಲಿ ಕೊರೋನಾ ನಿಯಂತ್ರಣ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 126 ಮಂದಿ ಆರೋಪಿಗಳನ್ನ ಹಜ್ ಭವನದಿಂದ ಬಿಡುಗಡೆ ಮಾಡಲಾಗಿದೆ.Bangalore-Padarayanapura-assult- case-MLA-Zamir Ahmad Khan -welcomed - 126 accused.

ಪಾದರಾಯನಪುರ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ 126 ಮಂದಿ ಆರೋಪಿಗಳಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಈ ಹಿನ್ನೆಲೆ ಇಂದು 126 ಮಂದಿ ಆರೋಪಿಗಳನ್ನ ಬಿಡುಗಡೆ ಮಾಡಲಾಗಿದ್ದು ಬಿಡುಗಡೆಯಾದ ಆರೋಪಿಗಳನ್ನ ಕಾಂಗ್ರೆಸ್ ಶಾಸಕರಾದ ಜಮೀರ್ ಅಹ್ಮದ್ ಖಾನ್ ಸ್ವಾಗತಿಸಿದ್ದಾರೆ. ಜತೆಗೆ ಆರೋಪಿಗಳಿಗೆ ಬಸ್ ವ್ಯವಸ್ಥೆಯನ್ನೂ ಮಾಡಿದ್ದಾರೆ ಎನ್ನಲಾಗಿದೆ.

ಇನ್ನು ಕೊರೋನಾ ತಡೆಗಟ್ಟಲು ಶ್ರಮಿಸುತ್ತಿದ್ದ ಕೊರೋನಾ ಕರ್ತವ್ಯದಲ್ಲಿದ್ದ ಪೊಲೀಸರು ಆರೋಗ್ಯ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳಿಗೆ ಶಾಸಕ ಜಮೀರ್ ಅಹ್ಮದ್ ಖಾನ್ ಸ್ವಾಗತ ನೀಡಿರುವುದು ಸಾಕಷ್ಟು ಟೀಕೆಗೆ ಕಾರಣವಾಗಿದೆ.

Key words: Bangalore-Padarayanapura-assult- case-MLA-Zamir Ahmad Khan -welcomed – 126 accused.