Saturday, September 26, 2026

BDA Apartments

ತಮಿಳುನಾಡಿಗೆ ಕಾವೇರಿ ನೀರು : CWRC ಆದೇಶ ಎತ್ತಿ ಹಿಡಿದ CWMA BDA JK_Adv BDA Adv
Home Front Page ತಮಿಳುನಾಡಿಗೆ ಕಾವೇರಿ ನೀರು : CWRC ಆದೇಶ ಎತ್ತಿ ಹಿಡಿದ CWMA

ತಮಿಳುನಾಡಿಗೆ ಕಾವೇರಿ ನೀರು : CWRC ಆದೇಶ ಎತ್ತಿ ಹಿಡಿದ CWMA

ನವದೆಹಲಿ,ಆಗಸ್ಟ್,11,2026 (www.justkannada.in):  ಕಾವೇರಿ ನದಿ ನೀರು ವಿವಾದದಲ್ಲಿ ಮತ್ತೆ ಮತ್ತೆ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದ್ದು ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ನೀಡಿದ್ದ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಎತ್ತಿ ಹಿಡಿದಿದೆ.

ತಮಿಳುನಾಡಿಗೆ ಪ್ರತಿನಿತ್ಯ 15 ದಿನಗಳ ಕಾಲ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶಿಸಿತ್ತು. ನಂತರ ಮಧ್ಯಾಹ್ನ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆ ನಡೆದಿದ್ದು ಈ ಸಭೆಯಲೂ ಸಿಡಬ್ಲ್ಯುಆರ್ ಸಿ ಆದೇಶವನ್ನ ಎತ್ತಿಹಿಡಿದಿದ್ದು ತಮಿಳುನಾಡಿಗೆ ನೀರು ಹರಿಸುವಂತೆ ಸೂಚಿಸಿದೆ.ತಮಿಳುನಾಡಿಗೆ ಕಾವೇರಿ ನೀರು cauvery- cwrc cauvery cwrc

ರಾಜ್ಯದ ಪರ ಸಭೆಯಲ್ಲಿ ಭಾಗಿಯಾಗಿದ್ದ  ಅಧಿಕಾರಿ ಗೌರವ್ ಗುಪ್ತ ಮಾತನಾಡಿ,ನಾವು ಸಮರ್ಥವಾಗಿ ವಾದ ಮಂಡಿಸಿದ್ದವು.  ಆದರೂ ನೀರು ಬಿಡುವಂತೆ ಆದೇಶಿಸಿದೆ. ಪ್ರತಿನಿತ್ಯ 15 ದಿನಗಳ ಕಾಲ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಿದೆ. ಆದೇಶದಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದಿದ್ದಾರೆ.CWRC ಆದೇಶ ಎತ್ತಿ ಹಿಡಿದ CWMA jk02_new jk02 new

Key words: Cauvery water, Tamil Nadu, CWMA, CWRC, order