Tuesday, August 11, 2026

BDA Apartments

Home Front Page ಆ.13ರ ಬಂದ್ ನಿಂದ ಹಿಂದೆ ಸರಿಯುವ ಮಾತೇ ಇಲ್ಲ- ವಾಟಾಳ್ ನಾಗರಾಜ್

ಆ.13ರ ಬಂದ್ ನಿಂದ ಹಿಂದೆ ಸರಿಯುವ ಮಾತೇ ಇಲ್ಲ- ವಾಟಾಳ್ ನಾಗರಾಜ್

ಹುಬ್ಬಳ್ಳಿ,ಆಗಸ್ಟ್,11,2026 (www.justkannada.in):  ತಮಿಳುನಾಡಿಗೆ ಪ್ರತಿನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಮತ್ತೆ ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶ ನೀಡಿದ ಬೆನ್ನಲ್ಲೆ ರಾಜ್ಯದಲ್ಲಿ ಆಕ್ರೋಶದ ಕಿಚ್ಚು ಮತ್ತೆ ಹೆಚ್ಚಾಗಿದೆ. ಈ ಮಧ್ಯೆ ಆಗಸ್ಟ್ 13 ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್ ನಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ವಾಟಾಳ್ ನಾಗರಾಜ್, ಯಾರೇ ಬೆಂಬಲ ನೀಡಲಿ ಅಥವಾ ನೀಡದಿರಲಿ, ಪೂರ್ವನಿರ್ಧಾರಿತವಾಗಿ ಕರೆ ನೀಡಿರುವಂತೆ ಆಗಸ್ಟ್ 13ರಂದು ರಾಜ್ಯ ಬಂದ್ ನಡೆಸೇ ತೀರುತ್ತೇವೆ ಎಂದು ಹೇಳಿದ್ದಾರೆ .

ಬಂದ್ ಗೆ ಸಾವಿರಾರು ಸಂಘಟನೆಗಳು ಬೆಂಬಲಿಸಿವೆ ಬೆಂಬಲ ನೀಡಲ್ಲ ಎಂದವರ ಜೊತೆ ಮಾತನಾಡುತ್ತೇವೆ  ಗುರುವಾರ ಕರ್ನಾಟಕ ಬಂದ್ ಆಗೇ ಆಗುತ್ತದೆ . ಬಂದ್ ನಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

Key words: Cauvery dispute, August 13, Karnataka bandh, Vatal Nagaraj