ಮೈಸೂರು,ನವೆಂಬರ್,12,2026 (www.justkannada.in): ನೂತನ ತಾರಾಲಯ ಉದ್ಘಾಟಿಸಲು ನಾಳೆ ಮೈಸೂರಿಗೆ ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದೆ.
ನಾಳೆ ಪ್ರಧಾನಿ ಮೋದಿ ಮೋದಿ ಮೈಸೂರು ಭೇಟಿ ಹಿನ್ನೆಲೆಯಲ್ಲಿ ಈ ಕೆಳಕಂಡ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.
ಲಲಿತಾದ್ರಿಪುರ ರಸ್ತೆ, ಐವಾಕ್ ರಸ್ತೆ, ಲಲಿತಮಹಲ್ ರಸ್ತೆ, ಚಾಮುಂಡಿಬೆಟ್ಟದ ರಸ್ತೆ, ಲಾರಿ ಟರ್ಮಿನಲ್ ರಸ್ತೆ, ನಂಜನಗೂಡು ರಸ್ತೆಯಲ್ಲಿ ಸಂಚಾರ ನಿರ್ಬಂಧ.
ಲಲಿತಾದ್ರಿಪುರ ರಸ್ತೆಯಿಂದ ಹೆಲಿಪ್ಯಾಡ್ ವೈ ಜಂಕ್ಷನ್‌ವರೆಗೆ, ಐವಾಕ್ ಜಂಕ್ಷನ್‌ನಿಂದ ಚಾಮುಂಡಿ ಬೆಟ್ಟದ ರಸ್ತೆ ಜಂಕ್ಷನ್, ಟಿ.ನರಸೀಪುರ ರಸ್ತೆ ಜಂಕ್ಷನ್‌ನಿಂದ ಆರ್‌ಎಂಸಿ ವೃತ್ತದವರೆಗೆ, ಸಂಗೊಳ್ಳಿರಾಯಣ್ಣ ವೃತ್ತದಿಂದ ಚಾಮುಂಡಿ ಬೆಟ್ಟ ದವರೆಗೆ, ಆರ್‌ಎಂಸಿ ವೃತ್ತದಿಂದ ರಾಜಹಂಸ ಜಂಕ್ಷನ್, ರಾಜಹಂಸ ಜಂಕ್ಷನ್ ನಿಂದ ನಂಜನಗೂಡು ರಿಂಗ್ ರಸ್ತೆಗಳಲ್ಲಿ ಸಂಪೂರ್ಣ ಸಂಚಾರ ನಿರ್ಬಂಧಿಸಲಾಗಿದೆ.
ನಿರ್ಬಂಧ ಹಿನ್ನೆಲೆಯಲ್ಲಿ ಬದಲಿ ಮಾರ್ಗ ಬಳಸಲು ಮೈಸೂರು ನಗರ ಸಂಚಾರಿ ಪೊಲೀಸರು ಸೂಚಿಸಿದ್ದಾರೆ.
ಲಲಿತಾದ್ರಿಪುರ ಕಡೆಯಿಂದ ಹೆಲಿಪ್ಯಾಡ್ ರಸ್ತೆ ಮೂಲಕ ಎಂಎಂ ರಸ್ತೆಗೆ ಸಾಗುವ ವಾಹನಗಳು ನೇತಾಜಿ ನಗರ, ಆಲನಹಳ್ಳಿ ರಸ್ತೆ, ಟಿ.ಜಂಕ್ಷನ್, ಆರ್.ಮಹದೇವಪ್ಪ ವೃತ್ತ, ಎಂಎಂ ರಸ್ತೆ ಮೂಲಕ ಸಾಗುವುದು.
ಟಿ.ನರಸೀಪುರ ಟಿ ಜಂಕ್ಷನ್ ಕಡೆಯಿಂದ ಎಂ.ಜಿ ರಸ್ತೆ ಕಡೆಗೆ ಸಾಗುವ ವಾಹನಗಳು ಟಿ.ಜಂಕ್ಷನ್, ಮಹಾದೇವಪ್ಪ ವೃತ್ತ, ಎಂಎಂ ರಸ್ತೆ, ನಜರಬಾದ್ ವೃತ್ತ, ಲಿಂಗಣ್ಣ ವೃತ್ತ, ಇಟ್ಟಿಗೆಗೂಡು ಪೋಸ್ಟ್ ಆಫೀಸ್ ರಸ್ತೆ, ಎಂಜಿ ರಸ್ತೆ ಅಂಡರಪಾಸ್ ಮೂಲಕ ಸಾಗುವುದು.
ಗೌತಮ ಬುದ್ದ ವೃತ್ತ ಕಡೆಯಿಂದ ಲಲಿತಾದ್ರಿಪುರ ಕಡೆಗೆ ಸಾಗುವ ವಾಹನಗಳು ವಿನಯಮಾರ್ಗ, ಸಂಗೀತಾ ಕಾರ್ನರ್, ಟಿ.ಜಂಕ್ಷನ್, ಆಲನಹಳ್ಳಿ ರಸ್ತೆ, ನೇತಾಜಿ ಮುಖ್ಯ ರಸ್ತೆ ಮೂಲಕ ಸಾಗುವಂತೆ ಪೊಲೀಸರು ಸೂಚಿಸಿದ್ದಾರೆ.
ಸರ್ಕಸ್ ಮೈದಾನದಿಂದ ಟಿ.ನರಸೀಪುರ ರಸ್ತೆ ಕಡೆಗೆ ಸಾಗುವ ವಾಹನಗಳು ನಜರಬಾದ್ ವೃತ್ತ, ಎಂಎಂ ರಸ್ತೆ, ಗೌತಮ ಬುದ್ದ ವೃತ್ತ, ವಿನಯ ಮಾರ್ಗ, ಸಂಗೀತ ಕಾರ್ನರ್, ಟಿ.ಜಂಕ್ಷನ್, ಆಲನಹಳ್ಳಿ ರಸ್ತೆ ಮೂಲಕ ಸಾಗುವುದು.
ಲಿಂಗಣ್ಣ ವೃತ್ತದ ಕಡೆಯಿಂದ ಎಂ.ಜಿ.ರಸ್ತೆ ಕಡೆಗೆ ಸಾಗುವ ವಾಹನಗಳು ಇಟ್ಟಿಗೆಗೂಡು ಪೋಸ್ಟ್ ಆಫೀಸ್ ರಸ್ತೆ, ಮಾನಸರ ರಸ್ತೆ,ಎಂಜಿ ರಸ್ತೆ ಅಂಡರ್ ಬ್ರಿಡ್ಜ್ ಮೂಲಕ ಸಾಗುವುದು.
ಗನ್‌ಹೌಸ್ ವೃತ್ತದ ಕಡೆಯಿಂದ ನಂಜನಗೂಡು ರಸ್ತೆ ಕಡೆಗೆ ಸಾಗುವ ವಾಹನಗಳು ಬಸವೇಶ್ವರ ವೃತ್ತ, ಅಗ್ರಹಾರ ವೃತ್ತ, ರಾಮಾನುಜ ರಸ್ತೆ, ವಿದ್ಯಾರಣ್ಯಪುರಂ ರಸ್ತೆ, ಅಕ್ಕಮಹಾದೇವಿ ರಸ್ತೆ ಮೂಲಕ ಸಾಗುವುದು.
ಕಂಸಾಳೆ ಮಹದೇವಯ್ಯ ವೃತ್ತದ ಕಡೆಯಿಂದ ಎಲೆತೋಟ ಜಂಕ್ಷನ್ ಮೂಲಕ ನಂಜನಗೂಡು ರಸ್ತೆ ಕಡೆಗೆ ಸಾಗುವ ವಾಹನಗಳು ಜೆಎಲ್‌ಬಿ ರಸ್ತೆ,ಕಂಸಾಳೆ ಮಹದೇವಯ್ಯ ವೃತ್ತ,ಸೂಯೇಜ್ ಫಾರಂ ರಸ್ತೆ, ಅಕ್ಕಮಹಾದೇವಿ ರಸ್ತೆ, ರಿಂಗ್ ರಸ್ತೆ ಮೂಲಕ ಸಾಗುವುದು.
ಕಂಸಾಳೆ ಮಹದೇವಯ್ಯ ವೃತ್ತದ ಕಡೆಯಿಂದ ಹಾರ್ಡಿಂಗ್ ವೃತ್ತದ ಕಡೆಗೆ ಸಾಗುವ ವಾಹನಗಳು ರಾಮಾನುಜ ರಸ್ತೆ, ಓಲ್ಡ್ ಜೆಎಸ್‌ಎಸ್ ಜಂಕ್ಷನ್, ಗನ್‌ಹೌಸ್ ವೃತ್ತದ ಮೂಲಕ ಸಾಗುವುದು.
ಜೆ.ಪಿ.ನಗರ ಲಿಂಕ್ ರಸ್ತೆ ಕಡೆಯಿಂದ ನಂಜನಗೂಡು ರಸ್ತೆ ಕಡೆಗೆ ಸಾಗುವ ವಾಹನಗಳು ಲಿಂಕ್ ರಸ್ತೆ,ಅಕ್ಕಮಹಾದೇವಿ ರಸ್ತೆ,ರಿಂಗ್ ರಸ್ತೆ ಮೂಲಕ ಸಾಗುವುದು.
ಜೆ.ಪಿ.ನಗರ ಲಿಂಕ್ ರಸ್ತೆ ಕಡೆಯಿಂದ ಗನ್‌ಹೌಸ್ ಕಡೆಗೆ ಸಾಗುವ ವಾಹನಗಳು ಲಿಂಕ್ ರಸ್ತೆ, ಅಕ್ಕಮಹಾದೇವಿ ರಸ್ತೆ, ವಿದ್ಯಾರಣ್ಯ ಪುರಂ ರಸ್ತೆ,ರಾಮಾನುಜ ರಸ್ತೆ,ಓಲ್ಡ್ ಜೆಎಸ್‌ಎಸ್ ಜಂಕ್ಷನ್, ಗನ್‌ಹೌಸ್ ವೃತ್ತದ ಮೂಲಕ ಸಾಗುವುದು.
ಸಂಗೊಳ್ಳಿ ರಾಯಣ್ಣ ವೃತ್ತದ ಕಡೆಯಿಂದ ಚಾಮುಂಡಿ ಬೆಟ್ಟ ಕಡೆಗೆ ಸಾಗುವ ವಾಹನಗಳು ಜಿಎಸ್‌ಟಿ ಭವನ ಜಂಕ್ಷನ್, ಗೌತಮ ಬುದ್ದ ವೃತ್ತ,ಸಂಗೀತ ಕಾರ್ನರ್,ಟಿ.ಜಂಕ್ಷನ್, ಸಾವಿತ್ರಬಾಯಿಪುಲೆ ವೃತ್ತ, ರಿಂಗ್ ರಸ್ತೆ, ಉತ್ತನಹಳ್ಳಿ ಮೂಲಕ ಚಾಮುಂಡಿ ಬೆಟ್ಟಕ್ಕೆ ಸಾಗಲು ಪೊಲೀಸರು ತಿಳಿಸಿದ್ದಾರೆ.






