ಬೆಂಗಳೂರು, ನವೆಂಬರ್, 12,2026 (www.justkannada.in): ನಾಳೆ ಬೆಂಗಳೂರು, ಮೈಸೂರು ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟಿಸಲಿದ್ದಾರೆ. ಈ ನಡುವೆ ನಾಳಿನ ಸಮಾರಂಭದಲ್ಲಿ ಬೆಂಗಳೂರು ಅಭಿವೃದ್ದಿ ಸಚಿವ ಕೃಷ್ಣೇಭೈರೇಗೌಡರ ಭಾಷಣಕ್ಕೆ ಕೋಕ್ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಸಂಬಂಧ ಸ್ವತಃ ಟ್ವೀಟ್ ಮಾಡಿ ಅಸಮಾಧಾನ ಹೊರ ಹಾಕಿರುವ ಸಚಿವ ಕೃಷ್ಣೇಭೈರೇಗೌಡರು, ಸಮಾರಂಭದಲ್ಲಿ ಬೆಂಗಳೂರು ಅಭಿವೃದ್ಧಿ ಮಂತ್ರಿಗೆ ಮಾತಾಡಲು ಅವಕಾಶವಿಲ್ಲ. ಕರ್ನಾಟಕ ರಾಜ್ಯಕ್ಕೆ ನ್ಯಾಯ ಕೇಳಿದ್ದಕ್ಕೆ ಸಿಕ್ಕ ಬಹುಮಾನ ಇದು ಎಂದು ಪೋಸ್ಟ್ ಮಾಡಿದ್ದಾರೆ. 
ಮೆಟ್ರೋ ಉದ್ಘಾಟನಾ ಸಮಾರಂಭದ ಡ್ರಾಫ್ಟ್ನಲ್ಲಿ ಅವಕಾಶ ನಿಗದಿಯಾಗಿತ್ತು. ಆದರೆ ನಿನ್ನೆ ರಾತ್ರಿ ಬಂದ ಅಂತಿಮಪಟ್ಟಿಯಲ್ಲಿ ನನ್ನ ಮಾತನ್ನು ಕಟ್ ಮಾಡಲಾಗಿದೆ. ನಮ್ಮ ಮೆಟ್ರೋ ಯೋಜನೆಗೆ ಬಹುತೇಕ ಬಂಡವಾಳ ನಮ್ಮದೇ ಆಗಿದ್ದು, ಕರ್ನಾಟಕ ರಾಜ್ಯಕ್ಕೆ ನ್ಯಾಯಯುತವಾದ ಪಾಲು ಕೇಳಿದರೆ ಈ ರೀತಿ ಶಿಕ್ಷೆ ಸಿಕ್ಕಿದೆ. ಪರವಾಗಿಲ್ಲ, ಸಮಾರಂಭದಲ್ಲಿ ನೀವು ನನ್ನ ಭಾಷಣ ಕಟ್ ಮಾಡಬಹುದು. ಆದರೆ ಬೆಂಗಳೂರು ಅಭಿವೃದ್ಧಿಗೆ ಕೆಲಸ ಮಾಡುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಇನ್ನೂ ಹೆಚ್ಚಿನ ಪರಿಶ್ರಮದಿಂದ ಕೆಲಸ ಮಾಡುತ್ತೇನೆಂದು ಸಚಿವ ಕೃಷ್ಣ ಭೈರೇಗೌಡರು ತಿರುಗೇಟು ನೀಡಿದ್ದಾರೆ.






