Thursday, November 12, 2026

Dasara Wishes

ಎಫ್ ಎಸ್‌ . ಎಲ್‌ ವರದಿ ಬಹಿರಂಗಕ್ಕೆ ಯಾಕೆ ಮೀನಾ-ಮೇಷ..? : ಆರ್.‌ ಅಶೋಕ್‌ ಪ್ರಶ್ನೆ...
Happy Dasara
Home Front Page ನೂತನ ತಾರಾಲಯ ಉದ್ಘಾಟನೆಗೆ ನಾಳೆ ಮೈಸೂರಿಗೆ ಪ್ರಧಾನಿ ಮೋದಿ

ನೂತನ ತಾರಾಲಯ ಉದ್ಘಾಟನೆಗೆ ನಾಳೆ ಮೈಸೂರಿಗೆ ಪ್ರಧಾನಿ ಮೋದಿ

ನೂತನ ತಾರಾಲಯ ಉದ್ಘಾಟನೆಗೆ ನಾಳೆ ಮೈಸೂರಿಗೆ ಪ್ರಧಾನಿ ಮೋದಿ

ಮೈಸೂರು,ನವೆಂಬರ್,11,2026 (www.justkannada.in): ಮೈಸೂರಿನಲ್ಲಿ ನೂತನವಾಗಿ ನಿರ್ಮಿಸಿರುವ ‘ಕಾಸ್ಮಾಸ್’ (COSMOS) ಟಿಲ್ಟೆಡ್ ಎಲ್‌ಇಡಿ ಡೋಮ್ ತಾರಾಲಯವನ್ನು ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.

ಚಾಮುಂಡಿ ಬೆಟ್ಟದ ತಪ್ಪಲಿನ ಕೆ ಸಿ ಲೇಔಟ್ ನಲ್ಲಿ ನಿರ್ಮಾಣವಾಗಿರುವ ನೂತನ ತಾರಾಲಯ ಉದ್ಘಾಟಿಸಲು ನಾಳೆ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಮಧ್ಯಾಹ್ನ 3.20ಕ್ಕೆ ಮೈಸೂರಿನ ಶಶಿರಂಜನ್ ಹೆಲಿಪ್ಯಾಡ್ ಗೆ ಆಗಮಿಸಲಿರುವ ಮೋದಿ ಅವರು 3.30ಕ್ಕೆ ಮಿಯಾವಾಕಿ ಅರಣ್ಯ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ.

ಮಧ್ಯಾಹ್ನ 3.50ಕ್ಕೆ ಕೆ.ಸಿ ಲೇಔಟ್ ಉದ್ಯಾನವನದಲ್ಲಿ ಗಿಡ ನೆಟ್ಟು ನೀರೆರೆದು ನಂತರ ತಾರಾಲಯ ಉದ್ಘಾಟನೆ ಮಾಡಲಿದ್ದು ಬಳಿಕ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ಭದ್ರತೆಯ ದೃಷ್ಟಿಯಿಂದ ಪಾಸ್ ಪಡೆದವರಿಗಷ್ಟೇ ಸಭೆಗೆ ಪ್ರವೇಶ ನೀಡಲಾಗುತ್ತಿದೆ.ನೂತನ ತಾರಾಲಯ ಉದ್ಘಾಟನೆಗೆ ನಾಳೆ ಮೈಸೂರಿಗೆ ಪ್ರಧಾನಿ ಮೋದಿ

ಇದಾದ ಬಳಿ ಸಂಜೆ 5.45ಕ್ಕೆ ಪ್ರಧಾನಿ ಮೋದಿ ಕಾರ್ಯಕ್ರಮ ಮುಗಿಸಿ ರಸ್ತೆ ಮೂಲಕ ಮೈಸೂರು ವಿಮಾನ ನಿಲ್ದಾಣದತ್ತ ಪ್ರಯಾಣ ಬೆಳೆಸಿ 6 ಗಂಟೆಗೆ ಮೈಸೂರು ವಿಮಾನ ನಿಲ್ದಾಣದಿಂದ ದೆಹಲಿಯತ್ತ ತೆರಳಲಿದ್ದಾರೆ.PM Modi jk02_new jk02 new

PM Modi, visit, Mysuru tomorrow, inauguration, new planetarium

English Summary
Title

PM Modi to Inaugurate India's First Tilted LED Dome Planetarium in Mysuru Tomorrow

Short Description
Prime Minister Narendra Modi will visit Mysuru on Friday, November 13, 2026, to inaugurate the landmark COSMOS-Mysuru Planetarium at the foothills of Chamundi Hill. Built at a cost of ₹118 crore by the Indian Institute of Astrophysics and the University of Mysore, it is India's first 8K tilted LED dome planetarium. During his afternoon visit, PM Modi will also open the Bharat Vana Miyawaki Mini Forest at K.C. Nagar before attending the inauguration ceremony between 4:00 PM and 5:45 PM. Authorities have tightened security and announced traffic diversions ahead of the high-profile event, which is set to boost science education and tourism in Karnataka.
Keywords
PM Modi, visit, Mysuru tomorrow, inauguration, new planetarium