Thursday, November 12, 2026

Dasara Wishes

Happy Dasara
Home Front Page ಡಿ.2ರಿಂದ ಚಳಿಗಾಲದ ಅಧಿವೇಶನ: ಸುವರ್ಣಸೌಧದಲ್ಲಿ ಸಿದ್ಧತೆ, ಪೊಲೀಸರ ಬಿಗಿ ಭದ್ರತೆ

ಡಿ.2ರಿಂದ ಚಳಿಗಾಲದ ಅಧಿವೇಶನ: ಸುವರ್ಣಸೌಧದಲ್ಲಿ ಸಿದ್ಧತೆ, ಪೊಲೀಸರ ಬಿಗಿ ಭದ್ರತೆ

ಡಿ.2ರಿಂದ ಚಳಿಗಾಲದ ಅಧಿವೇಶನ: ಸುವರ್ಣಸೌಧದಲ್ಲಿ ಸಿದ್ಧತೆ, ಪೊಲೀಸರ ಬಿಗಿ ಭದ್ರತೆ

ಬೆಳಗಾವಿ, ನವೆಂಬರ್, 12,2026 (www.justkannada.in):  ಡಿಸೆಂಬರ್ 2 ರಿಂದ ಬೆಳಗಾವಿಯ ಸುರ್ವಣಸೌಧದಲ್ಲಿ ರಾಜ್ಯ ವಿಧಾನಮಂಡಲ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಸಿದ್ದತಾ ಕಾರ್ಯಗಳು ಭರದಿಂದ ಸಾಗಿವೆ.

ವಿಧಾನಮಂಡಲ ಅಧಿವೇಶನ ಹಿನ್ನೆಲೆಯಲ್ಲಿ ಸುವರ್ಣ ಸೌಧ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಧಿವೇಶನದ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು 5,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ. ಇದರಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸುವ ಪೊಲೀಸರ ಜೊತೆಗೆ ಕೆಎಸ್‌ಆರ್‌ಪಿ ತುಕುಡಿಗಳು ಸೇರಿವೆ. ಭದ್ರತೆಯ ಭಾಗವಾಗಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಮತ್ತು ಬ್ಯಾರಿಕೇಡಿಂಗ್ ಕಾರ್ಯ ಕೂಡ ಪ್ರಗತಿಯಲ್ಲಿದೆ.ಡಿ.2ರಿಂದ ಚಳಿಗಾಲದ ಅಧಿವೇಶನ: ಸುವರ್ಣಸೌಧದಲ್ಲಿ ಸಿದ್ಧತೆ, ಪೊಲೀಸರ ಬಿಗಿ ಭದ್ರತೆ

ಪೊಲೀಸ್ ಆಯುಕ್ತ ಪ್ರಕಾಶ್ ನಿಕ್ಕಂ ಅವರ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಲಾಗಿದ್ದು, ಅಧಿವೇಶನ ಸಂದರ್ಭದಲ್ಲಿ ನಡೆಯುವ ಪ್ರತಿಭಟನೆಗಳನ್ನು ನಿರ್ವಹಿಸಲು ನಿರ್ದಿಷ್ಟ ಸ್ಥಳಗಳನ್ನು ಗುರುತಿಸಲಾಗಿದೆ. ಇನ್ನು ಸುವರ್ಣಸೌಧದಲ್ಲಿ ಸಿಬ್ಬಂದಿಗಳು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದು ಸಿದ್ದತಾ ಕಾರ್ಯ ಬರದಿಂದ ಸಾಗಿದೆ.Karnataka Legislature Winter Session 2026 jk02_new jk02 new

Winter session, Dec 2, Belagavi, Preparations, Suvarna Soudha, police security

English Summary
Title

Karnataka Legislature Winter Session 2026 in Belagavi: Dates, Suvarna Soudha Preparations & Police Security

Short Description
The Karnataka Legislature Winter Session 2026 will be held at Suvarna Vidhana Soudha in Belagavi from December 2 to December 11, spanning nine working days. Ahead of the session, district authorities and Belagavi police have launched extensive security and administrative preparations. Between 5,000 and 7,000 police personnel, including KSRP platoons, Quick Response Teams, and senior IPS officers, are being deployed alongside 600 CCTV cameras to monitor strategic locations and designated protest zones. Deputy Commissioner Mohammad Roshan has also formed specialized committees to oversee accommodation, transport, uninterrupted internet, and medical services for ministers, legislators, and visiting staff.