Thursday, November 12, 2026

Dasara Wishes

ಎಫ್ ಎಸ್‌ . ಎಲ್‌ ವರದಿ ಬಹಿರಂಗಕ್ಕೆ ಯಾಕೆ ಮೀನಾ-ಮೇಷ..? : ಆರ್.‌ ಅಶೋಕ್‌ ಪ್ರಶ್ನೆ...
Happy Dasara
Home Front Page ಮೈಸೂರಿನಲ್ಲಿ ನ.15ರಿಂದ ‘ರಾಷ್ಟ್ರೀಯ ಮಕ್ಕಳ ರಂಗೋತ್ಸವ-2026’

ಮೈಸೂರಿನಲ್ಲಿ ನ.15ರಿಂದ ‘ರಾಷ್ಟ್ರೀಯ ಮಕ್ಕಳ ರಂಗೋತ್ಸವ-2026’

ಮೈಸೂರಿನಲ್ಲಿ ನ.15ರಿಂದ ‘ರಾಷ್ಟ್ರೀಯ ಮಕ್ಕಳ ರಂಗೋತ್ಸವ-2026’

ಮೈಸೂರು,ನವೆಂಬರ್,12,2026 (www.justkannada.in):  ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ, ಮೈಸೂರು ಹಾಗೂ ಜಗನ್ನಾಥ್ ಸೆಂಟರ್ ಫಾರ್ ಆರ್ಟ್ಸ್ ಅಂಡ್ ಕಲ್ಟರ್ (ಜೆ.ಸಿ.ಎ.ಸಿ), ಮೈಸೂರು ಇವರ ಸಹಯೋಗದೊಂದಿಗೆ ‘ರಾಷ್ಟ್ರೀಯ ಮಕ್ಕಳ ರಂಗೋತ್ಸವ-2026’ ಅನ್ನು ಹಮ್ಮಿಕೊಳ್ಳಲಾಗಿದೆ.

ನವೆಂಬರ್ 15 ರಿಂದ 22, 2026 ರವರೆಗೆ ಈ ರಂಗೋತ್ಸವವು ಜರುಗಲಿದ್ದು, ಈ ಮಹೋತ್ಸವದ ಉದ್ಘಾಟನಾ ಸಮಾರಂಭವು ನವೆಂಬರ್ 15, 2026 ರ ಭಾನುವಾರದಂದು ಸಂಜೆ 5:00 ಗಂಟೆಗೆ ಮೈಸೂರಿನ ಜೆ.ಎಲ್.ಬಿ. ರಸ್ತೆಯಲ್ಲಿರುವ ಹಾರ್ಡ್ತಿಕ್ ಶಾಲೆ ಆವರಣದಲ್ಲಿರುವ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ (IIET) ಯಲ್ಲಿ ನೆರವೇರಲಿದೆ.

ಇಲ್ಲಿ ಕಥೆ ಹೇಳುವಿಕೆ (Storytelling), ಬೊಂಬೆಯಾಟ (Puppetry), ನಾಟಕಗಳು (Plays) ಹಾಗೂ ಮುಂತಾದ ಪ್ರಮುಖ ಕಲಾ ಪ್ರಕಾರಗಳಿಗೆ ವಿಶೇಷ ಅವಕಾಶ ನೀಡಲಾಗಿದೆ. ಕಥೆ ಹೇಳುವಿಕೆಯು ಭಾರತೀಯ ಸಂಸ್ಕೃತಿಯ ಜೀವನಾಡಿಯಾಗಿದ್ದು, ಡಿಜಿಟಲ್ ಪರದೆಗಳಿಗಿಂತ ಮುಂಚೆಯೇ ನಮ್ಮ ಪರಂಪರೆಯನ್ನು ಮಾತು, ಹಾಡು ಹಾಗೂ ಕಲೆಯ ಮೂಲಕ ಉಳಿಸಿಕೊಂಡು ಬಂದ ಸಂಪ್ರದಾಯವನು ಈ ಉತ್ಸವ ಬಿಂಬಿಸುತ್ತದೆ.

ಮಕ್ಕಳಲ್ಲಿ ರಂಗಭೂಮಿ ಕಲೆಯ ಬಗ್ಗೆ ಆಸಕ್ತಿ ಮೂಡಿಸಲು ಮತ್ತು ಅವರ ಸೃಜನಶೀಲತೆಯನ್ನು ಹೊರಹಾಕಲು ಈ ರಾಷ್ಟ್ರೀಯ ರಂಗೋತ್ಸವವು ಒಂದು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕೋಲ್ಕತ್ತಾದ ಖ್ಯಾತ ಪಾಂಡವಾನಿ ಕಲಾವಿದೆ ಸೀಮಾ ಘೋಷ್ ಅವರು ನೆರವೇರಿಸಲಿದ್ದಾರೆ.ಮೈಸೂರಿನಲ್ಲಿ ನ.15ರಿಂದ ‘ರಾಷ್ಟ್ರೀಯ ಮಕ್ಕಳ ರಂಗೋತ್ಸವ-2026’

ಮೈಸೂರಿನ ಬಿ.ಇ.ಒ ಕಚೇರಿಯ ಶಿಕ್ಷಣ ಸಂಯೋಜಕ ರಾಜೇಶ್ ವೈ.ಎನ್., ಜೆ.ಸಿ.ಎ.ಸಿ ಯ ವತಿಯಿಂದ ರಂಗಾಯಣದ ನಿವೃತ್ತ ನಟ ಹಾಗೂ ನಾಟಕಕಾರ ಎಸ್.ರಾಮನಾಥ್ ಹಾಗೂ ಮೈಸೂರಿನ ಹಾರ್ಡ್ವಕ್ ಪಿ.ಯು. ಕಾಲೇಜಿನ ಪ್ರಾಚಾರ್ಯರು ಸುಂದರೇಶ್ ದೇವಪ್ರಿಯಂ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಇದರೊಂದಿಗೆ ಹಿರಿಯ ರಂಗ ಕರ್ಮಿ ಹಾಗೂ ಇಂಡಿಯನ್ ಥಿಯೇಟರ್ ಫೌಂಡೇಶನ್ ನ ಟ್ರಸ್ಟಿ ಪ್ರಸನ್ನ ಅವರು ಈ ಸಮಾರಂಭದಲ್ಲಿ ಉಪಸ್ಥಿತಿಯನ್ನು ವಹಿಸಲಿದ್ದಾರೆ.

ಉದ್ಘಾಟನಾ ಸಮಾರಂಭದ ವಿಶೇಷ ಆಕರ್ಷಣೆಯಾಗಿ “ಪಾಂಡವಾನಿ: ಕಥೆ ಹೇಳುವ ಕಲೆ” ಪುಸ್ತಕದ ಕುರಿತು ಚರ್ಚೆ ಇರುತ್ತದೆ. ಈ ಚರ್ಚೆಯಲ್ಲಿ ಶಾಲೋಮ್ ಸನ್ನುತ ಸ್ನೇಹ ಹಾಗೂ ಕೀರ್ತಿ ಬೈಂದೂರು ಅವರು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ. ಇದರ ಬೆನ್ನಲ್ಲೇ ಕೋಲ್ಕತ್ತಾದಿಂದ ಆಗಮಿಸಿರುವ ಸೀಮಾ ಘೋಷ್ ಅವರಿಂದ “ಪಾಂಡವಾನಿ ಪ್ರದರ್ಶನ” ಜರುಗಲಿದೆ.

 

English Summary
Title

National Children's Theatre Festival 2026 in Mysuru: Dates, Venues & Storytelling Highlights

Short Description
Experience the magic of live storytelling at the National Children's Theatre Festival 2026 in Mysuru, organized by the Indian Institute of Educational Theatre (IIET). Running from November 15 to November 22, 2026, this eight-day cultural celebration features engaging plays, puppetry, and interactive performances tailored for young audiences. Evening shows begin daily at 6:00 PM at premier Mysuru venues, including the IIET campus on JLB Road and the Jagannatha Center for Art and Culture (JCAC) in Vijayanagar, alongside special school outreach programs. Tickets are available at the venue on show days. Bring your family to celebrate creativity, education, and performing arts in Karnataka's cultural capital.
Keywords
‘National Children’s Theatre Festival-2026, Mysuru, from, Nov 15