ಹಾವೇರಿ,ನವೆಂಬರ್,12,2026 (www.justkannada.in): ಗ್ರಾಮಾಡಳಿತ ಅಧಿಕಾರಿ( ವಿಎಒ) ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿಯನ್ನ ಅಮಾನತು ಮಾಡಲಾಗಿದೆ.
ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಹೆಡ್‌ಕಾನ್ಸ್‌ಟೆಬಲ್ ಗಳಾದ ಮರೆಣ್ಣವರ, ಹೊನ್ನಾಳಿ, ಮಣಕವಾಡ ಮತ್ತು ನಾಗನೂರು ಅವರನ್ನು ಅಮಾನತುಗೊಳಿಸಲಾಗಿದೆ.
ಕರ್ತವ್ಯ ಲೋಪವೆಸಗಿದ ಆಧಾರದ ಮೇಲೆ ಓರ್ವ ಸಿಪಿಐ ಇಬ್ಬರು ಪಿಎಸ್ ಐ ಗಳ ಮೇಲೆ ಶಿಸ್ತು ಕ್ರಮಕ್ಕೂ ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ನಡೆದ ಗ್ರಾಮಾಡಳಿತ ಅಧಿಕಾರಿ(ವಿಎಒ) ಪರೀಕ್ಷೆಯಲ್ಲಿ ಹಾನಗಲ್ ನ ಶಂಕರ್ ಬನ್ನೂರ್ ಎಂಬಾತ 151 ಅಂಕ ಪಡೆದಿದ್ದ. ಈತ ಮೊಬೈಲ್ ಬಳಸಿ ಪರೀಕ್ಷೆ ಬರೆದ ಆರೋಪ ಕೇಳಿ ಬಂದಿದೆ. ಸದ್ಯ ಶಂಕರ್ ಬನ್ನೂರು ಪೊಲೀಸರ ವಶದಲ್ಲಿದ್ದಾನೆ.







