Friday, September 25, 2026

BDA Apartments

ಸರ್ಕಾರದ ನಡೆ ಮನಸ್ಸಿಗೆ ನೋವು ತರಿಸಿದೆ- ಬಸವರಾಜ ಹೊರಟ್ಟಿ ಬೇಸರ BDA JK_Adv BDA Adv
Home Front Page ಸರ್ಕಾರದ ನಡೆ ಮನಸ್ಸಿಗೆ ನೋವು ತರಿಸಿದೆ- ಬಸವರಾಜ ಹೊರಟ್ಟಿ ಬೇಸರ

ಸರ್ಕಾರದ ನಡೆ ಮನಸ್ಸಿಗೆ ನೋವು ತರಿಸಿದೆ- ಬಸವರಾಜ ಹೊರಟ್ಟಿ ಬೇಸರ

ಹುಬ್ಬಳ್ಳಿ,ಆಗಸ್ಟ್,11,2026 (www.justkannada.in):  ಕಾಂಗ್ರೆಸ್ ಆಗಸ್ಟ್ 14ರವರೆಗೂ ರಾಜೀನಾಮೆ ಕೇಳಬಾರದಿತ್ತು. ರಾಜ್ಯ ಸರ್ಕಾರದ ನಡೆಯಿಂದ ಮನಸ್ಸಿಗೆ ನೋವಾಗಿದೆ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಬೇಸರ ಹೊರಹಾಕಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಸವರಾಜ ಹೊರಟ್ಟಿ, ರಾಜ್ಯಪಾಲರು ರಾಜೀನಾಮೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ರಾಜ್ಯ ಸರ್ಕಾರದ ನಡೆಯಿಂದ ಮನಸಿಗೆ ನೋವು ಆಗಿದೆ. ಉಪಸಬಾಪತಿ ನೇಮಕ ಬಳಿಕ ರಾಜೀನಾಮೆ ನೀಡುತ್ತೇನೆ ಎಂದಿದ್ದೆ.  ಅನಿವಾರ್ಯವಾಗಿ ರಾಜೀನಾಮೆ ನೀಡಿದ್ದೇನೆ  ರಾಜ್ಯಪಾಲರಿಗೆ  ಈ ಬಗ್ಗೆ ನಾನು ಪತ್ರ ಬರೆದಿದ್ದೇನೆ ಎಂದರು.ಸರ್ಕಾರದ ನಡೆ ಮನಸ್ಸಿಗೆ ನೋವು ತರಿಸಿದೆ basavaraj horatti

ಸಭಾಪತಿ ರಾಜೀನಾಮೆ ಕೇಳುವ ಅಧಿಕಾರ ಯಾರಿಗೂ ಇಲ್ಲ. ಅವಿಶ್ವಾಸ ಮಂಡನೆ ಮಾಡಿ ಕೆಳಗಿಳಿಸಬಹುದು ಕಾಂಗ್ರೆಸ್ ಆಗಸ್ಟ್ 14ರವರೆಗೂ ರಾಜೀನಾಮೆ ಕೇಳಬಾರದಿತ್ತು. ನನ್ನ ಮೇಲೆ ಅವಿಶ್ವಾಸ ಮಂಡನೆ ಮಾಡಲು ಕಾರಣವಿರಲಿಲ್ಲ. ಸ್ಪೀಕರ್ ಆಯ್ಕೆ ಮಾಡುವ ಸರ್ವಾಧಿಕಾರ ಸದನದ್ದು. ಪಕ್ಷದ ಲೆಟರ್ ಹೆಡ್ ನಲ್ಲಿ ಹೆಸರು ಪ್ರಕಟ ಮಾಡೋದು ತಪ್ಪು ಅದು  ಸಂವಿಧಾನದ ವಿರೋಧಿ ನಡೆ ಎಂದರು.ಬಸವರಾಜ ಹೊರಟ್ಟಿ ಬೇಸರ jk02_new jk02 new

Key words: government, Decision, Basavaraja  Horatti, sadness