“ನಂಜನಗೂಡು ಜಾತ್ರಾ ಮಹೋತ್ಸವ ರದ್ದು, : ಜಿಲ್ಲಾಧಿಕಾರಿ ಮತ್ತು ಎಸ್ಪಿ ತೀರ್ಮಾನ ಸರಿ” : ಶಾಸಕ ಹರ್ಷವರ್ಧನ್

ಮೈಸೂರು,ಮಾರ್ಚ್,20,2021(www.justkannada.in) : ನಂಜನಗೂಡು ಜಾತ್ರಾ ಮಹೋತ್ಸವ ರದ್ದು. ಜಿಲ್ಲಾಧಿಕಾರಿಗಳು, ಎಸ್ಪಿ ನನ್ನೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಂಡಿದ್ದಾರೆ. ಮೂರ್ನಾಲ್ಕು ದಿನದ ಹಿಂದೆಯೇ ಡಿಸಿ ನನಗೆ ತಿಳಿಸಿದ್ದಾರೆ. ಅವರು ತೆಗೆದುಕೊಂಡು ತೀರ್ಮಾನ ಸರಿ ಎಂದು ಶಾಸಕ ಹರ್ಷವರ್ಧನ್ ಹೇಳಿದ್ದಾರೆ.jkನಂಜನಗೂಡು ಜಾತ್ರಾ ಮಹೋತ್ಸವ ರದ್ದು ವಿಚಾರವಾಗಿ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಲಿಮಿಟೇಶನ್ ಮಾಡಿಕೊಂಡು ಆಚರಣೆ ಮಾಡಿ ಎಂದು ಹೇಳಿದ್ದೆ. ಸಣ್ಣದಾಗಿಯಾದರು ಆಚರಣೆ ಮಾಡಿ ಎಂದು ಹೇಳಿದ್ದೆ. ದಿನದಿಂದ ದಿನಕ್ಕೆ ಕೊರೋನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಈ ಕ್ರಮ ತೆಗೆದುಕೊಂಡಿದ್ದಾರೆ ಎಂದಿದ್ದಾರೆ.

ಜಾತ್ರೆಯಲ್ಲಿ 3 ರಿಂದ 4 ಲಕ್ಷ ಮಂದಿ ಸೇರುತ್ತಾರೆ. ಹೀಗಾಗಿ, ಜಿಲ್ಲಾಧಿಕಾರಿ ಹಾಗೂ ಎಸ್ಪಿ  ತೆಗೆದುಕೊಂಡು ತೀರ್ಮಾನ ಸರಿ ಅನ್ನಿಸಿತು. ಕಳೆದ ವರ್ಷವು ಜಾತ್ರೆ ರದ್ದು ಮಾಡಲಾಗಿತ್ತು. ಬೇರೆ ಲೀಮಿಟೇಶನ್ ಜೊತೆಗೆ  ಜಾತ್ರೆ ಯಶಸ್ವಿಗೊಳಿಸೋಣ ರದ್ದು ಮಾಡೋದು ಬೇಡ ಎಂದು ಮತ್ತೆ ಕೇಳುತ್ತೇನೆ ಎಂದು ಹೇಳಿದರು.

ಕೊರೊನ ಕೇಸ್ ಗಳು ಹೆಚ್ಚಾದರೆ ಯಾರು ಜವಾಬ್ದಾರರು?

ಕೊರೋನಾ ಕೇಸ್ ಗಳು ಹೆಚ್ಚಾದರೆ ಯಾರು ಜವಾಬ್ದಾರರು? ಪ್ರಕರಣಗಳು ಜಾಸ್ತಿಯಾದರೆ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ?, ದಿನದಿನ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಪ್ರಕರಣಗಳನ್ನ ನೋಡಿದರೆ ಭಯ ಆಗುತ್ತೆ. ಸಿಎಂಗೆ, ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತೆ. ಕೊರೊನ ಎರಡನೇ ಅಲೆ ಫಾಸ್ಟ್ ಆಗಿದೆ. ದಿನಕ್ಕೆ ಸಾವಿರ ಕೇಸ್ ಗಳು ಬೆಂಗಳೂರಿನಲ್ಲಿ ಆಗುತ್ತಿವೆ. ಭಕ್ತಾದಿಗಳ ಭಾವನೆಗಳು ಅರ್ಥ ಆಗುತ್ತೆ. ಆದರೆ, ಭಕ್ತರು ಸಹ ಅರ್ಥಮಾಡಿಕೊಳಬೇಕು ಎಂದು ಮನವಿ ಮಾಡಿದ್ದಾರೆ.Cancellation-Nanjangud jatra jubilee-Collector-SP -decision-correct-Legislator-Harshavardhan

ಜಾತ್ರಾಮಹೋತ್ಸವ ನಡೆಸುವ ಕುರಿತು ಮತ್ತೆ ಜಿಲ್ಲಾಧಿಕಾರಿಗಳ ಜೊತೆ ಮಾತು

ಕೊರೊನ ಸಂಕಷ್ಟದ ಕಾಲದಲ್ಲಿ  ಇಷ್ಟು ಜನ ಸೇರಿದರೆ ಕಷ್ಟ ಆಗುತ್ತೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು. ವೈಯಕ್ತಿಕವಾಗಿ ನನಗೆ ಜಾತ್ರಾಮಹೋತ್ಸವ ನಡೆಸಬೇಕು ಎನ್ನುವುದಿದೆ. ಲಿಮಿಟೇಶನ್ ಗಳ ಜೊತೆಗೆ ದೊಡ್ಡ ತೇರು ಎಳೆಯಲು 2ರಿಂದ 3ಸಾವಿರ ಜನರು ಬೇಕು. ಸಣ್ಣ ತೇರು ಎಳೆದರೆ 500 ಮಂದಿ ಸಾಕು. ಈ ಬಗ್ಗೆ ಮತ್ತೆ ಜಿಲ್ಲಾಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.

key words : Cancellation-Nanjangud jatra jubilee-Collector-SP -decision-correct-Legislator-Harshavardhan