Sunday, September 20, 2026

BDA Apartments

ಉದ್ಯಮಿ ಸಿದ್ಧಾರ್ಥ ಸಾವು ಹಿನ್ನೆಲೆ: ಸತತ 2ನೇ ದಿನವೂ ಕುಸಿತ ಕಂಡ ಕೆಫೆ ಕಾಫಿಡೇ...
Home Front Page ಉದ್ಯಮಿ ಸಿದ್ಧಾರ್ಥ ಸಾವು ಹಿನ್ನೆಲೆ: ಸತತ 2ನೇ ದಿನವೂ ಕುಸಿತ ಕಂಡ ಕೆಫೆ ಕಾಫಿಡೇ ಷೇರುಗಳ...

ಉದ್ಯಮಿ ಸಿದ್ಧಾರ್ಥ ಸಾವು ಹಿನ್ನೆಲೆ: ಸತತ 2ನೇ ದಿನವೂ ಕುಸಿತ ಕಂಡ ಕೆಫೆ ಕಾಫಿಡೇ ಷೇರುಗಳ ಮೌಲ್ಯ …

ಬೆಂಗಳೂರು,ಜು,31,2019(www.justkannada.in):  ಉದ್ಯಮಿ, ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಸಾವನ್ನಪ್ಪಿದ ಹಿನ್ನೆಲೆ  ಸತತ 2ನೇ ದಿನವೂ ಕೆಫೆ ಕಾಫಿ ಡೇ  ಷೇರುಗಳ ಮೌಲ್ಯ ಕುಸಿತ ಕಂಡಿದೆ.

ಉದ್ಯಮಿ ಸಿದ್ಧಾರ್ಥ್ ಸೋಮವಾರ ಸಂಜೆ ನಾಪತ್ತೆಯಾಗಿದ್ದರು. ಅವರ ಮೃತದೇಹ ಇಂದು ಪತ್ತೆಯಾಗಿತ್ತು.  ಖ್ಯಾತ ಉದ್ಯಮಿ ಸಿದ್ಧಾರ್ಥ ಅವರ ನಾಪತ್ತೆಯಾಗಿದ್ದ  ಹಿನ್ನೆಲೆ  ನಿನ್ನೆ ಷೇರು ಮಾರುಕಟ್ಟೆಯಲ್ಲಿ ಕೆಫೆ ಕಾಫಿ ಡೇ ಷೇರು ಮೌಲ್ಯ 38 ರೂ.ಗಳಷ್ಟು ಕುಸಿತ ಕಂಡಿತ್ತು.

ಇದೀಗ ಸಿದ್ದಾರ್ಥ್ ಸಾವಿನ ಬಳಿಕ ಮತ್ತೆ ಷೇರುಮಾರುಕಟ್ಟೆಯಲ್ಲಿ ಕೆಫೆ ಕಾಫಿ ಡೇ ಷೇರುಗಳ ಮೌಲ್ಯ 123 ರೂಗೆ ಕುಸಿತ ಕಂಡಿದೆ.  ಷೇರುಗಳ ಮೌಲ್ಯ ಶೇ. 20ರಷ್ಟು ಕುಸಿತ ಕಂಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕಳೆದ ವಾರ ಕೆಫೆ ಕಾಫಿ ಡೇ ಷೇರು ಮೌಲ್ಯ 191 ರೂ ಇತ್ತು.

Key words: Businessman -Siddhartha -death  Cafe Coffee Day- Shares- fell