ಕಾಫಿ ಡೇ ಕಂಪನಿ ಮುಂದುರೆಸಲು ತೀರ್ಮಾನ: ಹಂಗಾಮಿ ಅಧ್ಯಕ್ಷರು ಮತ್ತು ಸಿಒಒ ನೇಮಕ..

ಬೆಂಗಳೂರು,ಜು,31,2019(www.justkannada.in): ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಸಾವು ಹಿನ್ನೆಲೆ ಕೆಫೆ ಕಾಫಿ ಡೇ ಕಂಪನಿಗೆ ಮಧ್ಯಂತರ ಅಧ್ಯಕ್ಷರನ್ನಾಗಿ ಎಸ್.ವಿ ರಂಗನಾಥ್ ಅವರನ್ನ ನೇಮಕ ಮಾಡಲಾಗಿದೆ.

ಇಂದು ಬೆಂಗಳೂರಿನ ವಿಠಲ ಮಲ್ಯ ರಸ್ತೆಯಲ್ಲಿರುವ ಕೆಫೆ ಕಾಫಿ ಡೇ ಕೇಂದ್ರ ಕಚೇರಿಯಲ್ಲಿ  ಬೋರ್ಡ್ ಆಫ್ ಡೈರೆಕ್ಟರ್ಸ್ ಸಭೆನಡೆಸಲಾಗಿದ್ದು ಸಭೆಯಲ್ಲಿ ಕೆಫೆ ಕಾಫಿ ಡೇ ಕಂಪನಿ ಮುಂದುವರೆಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.  ಈ ಹಿನ್ನೆಲೆ  ಇದೀಗ ಕಾಫಿ ಡೇಗೆ ಹೊಸ ಆಡಳಿತ ಮಂಡಳಿಯನ್ನು ರಚಿಸಿದ್ದು, ಹಂಗಾಮಿ ಅಧ್ಯಕ್ಷರಾಗಿ ಎಸ್ ವಿ ರಂಗನಾಥ್ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಜತೆಗೆ ಸಿಒಒ ಆಗಿ  ನಿತಿನ್ ಬಾಗ್ಮನೆ ಅವರನ್ನ ನೇಮಕ ಮಾಡಲಾಗಿದೆ.

ಕಳೆದ ಸೋಮವಾರ ಕಾಫಿ ಡೇ ಮಾಲೀಕ ಸಿದ್ಧಾರ್ಥ್  ನಾಪತ್ತೆಯಾಗಿದ್ದರು.  ಇಂದು ಮಂಗಳೂರಿನ ನೇತ್ರಾವತಿ  ಹಿನ್ನೀರಿನಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು   ಸಿದ್ಧಾರ್ಥ್ ಅವರ ಸಾವಿನ ನಂತರ  ಕಾಫಿ ಡೇ ಕಂಪನಿ ಮುಚ್ಚಲ್ಪಡುತ್ತದೆ ಎಂದು ಸುದ್ದಿ ಹಬ್ಬಿತ್ತು. ಈ ಕುರಿತು ಕಾಫಿ ಡೇ ಕಂಪನಿಯ ಬೋರ್ಡ್ ಆಫ್ ಡೈರೆಕ್ಟರ್ಸ್ ಸಭೆ ನಡೆಸಿ, ಯಾವುದೇ ಕಾರಣಕ್ಕೂ ಕಾಫಿ ಡೇ ಕಂಪನಿಯನ್ನು ಮುಚ್ಚುವುದಿಲ್ಲ. ಮುನ್ನಡೆಸಿಕೊಂಡು ಹೋಗಲಾಗುತ್ತದೆ ಎಂದು ನಿರ್ಧಾರ ಕೈಗೊಂಡಿದೆ.

Key words: continue – Coffee Day –Company-  Appointment -Provisional President – COO.