Saturday, September 5, 2026

BDA Apartments

Home Front Page ಖಾಸಗಿ ಬಸ್ ಅಪಘಾತ ಪ್ರಕರಣ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ ಘೋಷಿಸುವಂತೆ ಹೆಚ್.ಡಿ ಕುಮಾರಸ್ವಾಮಿ...

ಖಾಸಗಿ ಬಸ್ ಅಪಘಾತ ಪ್ರಕರಣ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ ಘೋಷಿಸುವಂತೆ ಹೆಚ್.ಡಿ ಕುಮಾರಸ್ವಾಮಿ ಆಗ್ರಹ.

ಬೆಂಗಳೂರು, ಮಾರ್ಚ್.20,2022(www.justkannada.in):  ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಬಳಿ  ಸಂಭವಿಸಿದ  ದ ಖಾಸಗಿ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ  ರಾಜ್ಯ ಸರಕಾರ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಕಿಡಿಕಾರಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ರಾಜ್ಯದಲ್ಲಿ ಇಂತಹ ದುರ್ಘಟನೆ ನಡೆದರೂ ಸಿಎಂ ಬ್ಯುಸಿಯಾಗಿದ್ದರು. ನಿನ್ನೆ ಆರ್ ಆರ್ ಸಿನಿಮಾ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದರು.  4 ಗಂಟೆಗಳ ಕಾಲ ಸಿಎಂ ಸಮಯ ಕೊಟ್ಟಿದ್ದರು.  ಸಿಎಂ ಇಂಥ ಕಾರ್ಯಕ್ರಮಗಳಿಗೆ ಸಮಯ ಕೊಡ್ತಾರೆ  ಎಂದು ಕಿಡಿಕಾರಿದರು.

ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರ ಘೋಷಿಸಿರುವ ಪರಿಹಾರವನ್ನ  ಹೆಚ್ಚಿಸಲಿ. ಬೇರೆ ವಬೇರೆ ಪ್ರಕರಣಗಳಲ್ಲಿ ನೀಡುವಂತೆ  ಮೃತರ ಕುಟುಂಬಳಿಗೆ 25 ಲಕ್ಷ ಪರಿಹಾರ ನೀಡಿ. ಸರಿಯಾದ ಬಸ್ ವ್ಯವಸ್ಥೆ ಮಾಡಿದ್ರೆ ಈ ರೀತಿ ಘಟನೆ ಆಗುತ್ತಿರಲಿಲ್ಲ ಎಂದು ಹೆಚ್.ಡಿಕೆ ಬೇಸರ ವ್ಯಕ್ತಪಡಿಸಿದರು.

Key words: bus accident-case-HD Kumaraswamy