ನಿರಂತರವಾಗಿ ಬೊಮ್ಮಾಯಿ ಅವರೇ ಸಿಎಂ ಆಗಲಿ- ಹೊಗಳಿದ ಶಾಸಕ ಜಿ.ಟಿ ದೇವೇಗೌಡ.

ಬೆಂಗಳೂರು,ಮಾರ್ಚ್,20,2022(www.justkannada.in): ನಿರಂತರವಾಗಿ  ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗಲಿ ಎಂದು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಹೊಗಳಿದ್ದಾರೆ.

ಸಹಕಾರ ಇಲಾಖೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾಸಕ ಜಿಟಿ ದೇವೇಗೌಡ, ನಿರಂತರವಾಗಿ ಬೊಮ್ಮಾಯಿ  ಅವರೇ ಸಿಎಂ ಆಗಲಿ.   ಸಹಕಾರ ಇಲಾಖೆಗೆ ಸಿಎಂ ಬಹಳ ಸಹಕಾರ ಕೊಟ್ಟಿದ್ದಾರೆ.  ಕೊರೋನಾ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು. ಕೊರೊನಾ ಸಮಯದಲ್ಲಿ  ಜನರನ್ನ ಕಾಪಾಡುವ ಕೆಲಸ ಮಾಡಿದ್ರು  ಸಿಎಂ ಬಗ್ಗೆ ಎಷ್ಟು ಮಾತನಾಡಿದ್ರೂ ಸಾಲಲ್ಲ.

ಸಿಎಂ ಬೊಮ್ಮಾಯಿಗೆ ತಾಯಿ ಚಾಮುಂಡೇಶ್ವರಿಯ  ಆಶೀರ್ವಾದ ಇರಲಿ ಎಂದು ಶಾಸಕ ಜಿ.ಟಿ ದೇವೇಗೌಡ ನುಡಿದರು.

Key words: CM-Basavaraj bommai-MLA-GT Devegowda