Tuesday, September 22, 2026

BDA Apartments

ಸಿಎಂ ಯಡಿಯೂರಪ್ಪ ರಾಜಾ ಹುಲಿಯಲ್ಲ, ಹೆಣ್ಣು ಹುಲಿ: ಜೆಡಿಎಸ್ ಶಾಸಕ ಟೀಕೆ ! BDA JK_Adv BDA...
Home Front Page ಸಿಎಂ ಯಡಿಯೂರಪ್ಪ ರಾಜಾ ಹುಲಿಯಲ್ಲ, ಹೆಣ್ಣು ಹುಲಿ: ಜೆಡಿಎಸ್ ಶಾಸಕ ಟೀಕೆ !

ಸಿಎಂ ಯಡಿಯೂರಪ್ಪ ರಾಜಾ ಹುಲಿಯಲ್ಲ, ಹೆಣ್ಣು ಹುಲಿ: ಜೆಡಿಎಸ್ ಶಾಸಕ ಟೀಕೆ !

ಬೆಂಗಳೂರು, ಸೆಪ್ಟೆಂಬರ್ 08, 2019 (www.justkannada.in): ಸಿಎಂ ಯಡಿಯೂರಪ್ಪ ರಾಜಾಹುಲಿ ಅಲ್ಲ. ಅವರು ಹೆಣ್ಣು ಹುಲಿ ಎಂದು ಯಾದಗಿರಿ ಜಿಲ್ಲೆ ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಟೀಕಿಸಿದ್ದಾರೆ.

ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರ ಅನುದಾನವನ್ನ ಕಡಿತಗೊಳಿಸಿರೋ ಬಿಜೆಪಿ ಸರ್ಕಾರದ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೈದ್ರಾಬಾದ್ ಕರ್ನಾಟಕ ಮಂಡಳಿಯನ್ನ ಕಲ್ಯಾಣ ಕರ್ನಾಟಕ ಅಂತಾ ಹೆಸರು ಬದಲಿಸಿರೋದು ಸ್ವಾಗತಾರ್ಹ ಎಂದು ಹೇಳಿದ್ದಾರೆ.

ಆದರೆ ಪ್ರದೇಶಾಭಿವೃದ್ಧಿಗೆ ಮೀಸಲಿದ್ದ 4 ಕೋಟಿ ರೂಪಾಯಿ ಕಡಿತಗೊಳಿಸಲಾಗಿದೆ. ಅಲ್ದೆ, ಗುರುಮಠಕಲ್ ಕ್ಷೇತ್ರಕ್ಕೆ ಮೀಸಲಿದ್ದ 3.5 ಕೋಟಿ ರೂಪಾಯಿ ಪಂಚಾಯತ್ ರಾಜ್ ಅನುದಾನವನ್ನೂ ಕಡಿತಗೊಳಿಸಲಾಗಿದೆ ಅಂತಾ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.