Tuesday, August 4, 2026

BDA Apartments

Home Front Page ಸಿದ್ಧರಾಮಯ್ಯ ಮತ್ತೆ ಸಿಎಂ ಆಗಲಿ ಎಂದ ಶಾಸಕ ಜಮೀರ್ ಗೆ ಬಿ.ಕೆ ಹರಿಪ್ರಸಾದ್ ಟಾಂಗ್.

ಸಿದ್ಧರಾಮಯ್ಯ ಮತ್ತೆ ಸಿಎಂ ಆಗಲಿ ಎಂದ ಶಾಸಕ ಜಮೀರ್ ಗೆ ಬಿ.ಕೆ ಹರಿಪ್ರಸಾದ್ ಟಾಂಗ್.

ಬೆಂಗಳೂರು,ಮೇ,11,2022(www.justkannada.in):  ಸಿದ್ಧರಾಮಯ್ಯ ಮತ್ತೆ ಸಿಎಂ ಆಗಲಿ ಎಂದು ಹೇಳಿಕೆ ನೀಡಿದ್ಧ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಗೆ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಟಾಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಬಿ.ಕೆ ಹರಿಪ್ರಸಾದ್, ಚುನಾವಣೆಗೆ ಇನ್ನೂ ಒಂದು ವರ್ಷ ಇದೆ. ಜಮೀರ್ ಗೆ ಅ ಮೇಲೆ ಕೇಳೋಕೆ ಹೇಳಿ. ಜಮೀರ್ ಹೇಳಿಕೆ ಅದು ಅವರ ವೈಯಕ್ತಿಕ. ಸಿದ್ದು ಸಿಎಂ ಆಗಲಿ ಎಂದು ಅವರೊಬ್ಬರೇ ಹೇಳಿದ್ದು.  ನಾವು 80 ಮಂದಿಯಲ್ಲಿ ಯಾರೊಬ್ಬರು ಆ ರೀತಿ ಹೇಳಿಲ್ಲ. ಸಿಎಂ ಆಯ್ಕೆ ಹೇಗೆ ಎಂದು ಕಾಂಗ್ರೆಸ್ ನಾಯಕರಿಗೆ ಗೊತ್ತು.  ಸಿಎಂ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸಿಎಂ ಆಗಲಿ ಅಂತಾ ಪ್ರಾರ್ಥನೆ ಮಾಡಿ ಎಂದು ಜಮೀರ್ ಅಂದಿದ್ದಾರೆ. ನೀವು ಪ್ರಾರ್ಥನೆ ಮಾಡಿ ಎಂದರು.

Key words: BK Hariprasad- MLA- Jamir ahamad khan- Siddaramaiah – CM -again