Sunday, August 23, 2026

BDA Apartments

Home Front Page ಡಿ. ಕೆ. ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡುವ ಅವಶ್ಯಕತೆ ನಮಗಿಲ್ಲ- ಶಾಸಕ ಸಿ.ಟಿ ರವಿ.

ಡಿ. ಕೆ. ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡುವ ಅವಶ್ಯಕತೆ ನಮಗಿಲ್ಲ- ಶಾಸಕ ಸಿ.ಟಿ ರವಿ.

ಚಿಕ್ಕಮಗಳೂರು, ಮೇ 11,2022(www.justkannada.in): ನಮಗೆ ಡಿ. ಕೆ. ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡುವ ಅವಶ್ಯಕತೆಯಿಲ್ಲ. ಜನರೇ ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅಭಿಪ್ರಾಯ ತಿಳಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಇಂದು ಮಾತನಾಡಿದ ಶಾಸಕ ಸಿ.ಟಿ ರವಿ, ಏನೂ ತಪ್ಪು ಮಾಡದಿದ್ದರೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭಯ ಪಡುವ ಅವಶ್ಯಕತೆಯಿಲ್ಲ. ಹಾಗಾಗಿ, ನಾವು ಅವರನ್ನು ಟಾರ್ಗೆಟ್ ಮಾಡುವ ಪ್ರಮೇಯವೇ ಇಲ್ಲ. ಯಾವುದೇ ತಪ್ಪು ಮಾಡದಿದ್ದರೆ ಡಿ. ಕೆ. ಶಿವಕುಮಾರ್ ಯಾಕೆ ಭಯ ಪಡಬೇಕು?. ತಪ್ಪು ಮಾಡಿದ್ದರೆ ತಾನೇ ಭೀತಿಯಿಂದ ಇರಬೇಕು. ನಾನೊಬ್ಬ ರಾಜಕಾರಣಿಯೆಂದು ತಪ್ಪು ಮಾಡಿದ್ದರೂ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನುಡಿದರು.

ಪಂಜಾಬ್ ನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆದರೆ ಅಲ್ಲಿ ಆಮ್ ಆದ್ಮಿ ಪಕ್ಷಕ್ಕೆ ರೆಡ್ ಕಾರ್ಪೆಟ್ ಹಾಕಿಕೊಟ್ಟು ಸೋತು ಸುಣ್ಣವಾಗಿದ್ದಾರೆ.  ಕಾಂಗ್ರೆಸ್ ನಿಧಾನವಾಗಿ ದೇಶದಲ್ಲಿ ಮೂಲೆಗುಂಪಾಗುತ್ತಿದೆ. ಹೀಗಾಗಿ, ಡಿ. ಕೆ. ಶಿವಕುಮಾರ್ ಅವರನ್ನು ನಾವ್ಯಾಕೆ ಟಾರ್ಗೆಟ್ ಮಾಡಲಿ ಎಂದು ಸಿ.ಟಿ ರವಿ ಹೇಳಿದರು.

Key words: D. K shivakumar-no target- MLA-CT Ravi.