ಬೆಳಗಾವಿ ಎಥೆನಾಲ್‌ ಅಷ್ಟೇ ಅಲ್ಲ ವಿಮಾನಗಳ ಇಂಧನ ಉತ್ಪಾದನೆಯ ಕೇಂದ್ರವಾಗುತ್ತೆ- ಕೇಂದ್ರ ಸಚಿವ ನಿತಿನ್ ಗಡ್ಕರಿ.

ಬೆಳಗಾವಿ, ಫೆಬ್ರವರಿ 22,2024(www.justkannada.in): ಬೆಳಗಾವಿಯು ಮುಂದಿನ ದಿನಗಳಲ್ಲಿ ಎಥೆನಾಲ್‌ ಉತ್ಪಾದನೆ ಅಷ್ಟೇ ಅಲ್ಲ ವಿಮಾನಗಳ ಇಂಧನ ಉತ್ಪಾದನೆಯ ಕೇಂದ್ರವಾಗುತ್ತದೆ ಎಂದು  ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದರು.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ  ಅವರು ಇಂದು 6,975 ಕೋಟಿ ರೂ. ಮೌಲ್ಯದ 400 ಕಿ.ಮೀ. ರಸ್ತೆ ಕಾಮಗಾರಿ ಮತ್ತು ಬೆಳಗಾವಿ ಸೇರಿ ಉತ್ತರ ಕರ್ನಾಟಕದ ಹಲವು ಯೋಜನೆಗಳಿಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಲೋಕೋಪಯೋಗಿ ಸಚಿವರು ಕರ್ನಾಟಕದಲ್ಲಿ ಇಥೆನಾಯಿಲ್ ಬಳಕೆಗೆ ಪ್ರೋತ್ಸಾಹ ಕೊಡಿ. ಇದರಿಂದ ಪೆಟ್ರೋಲ್ ಗಿಂತಲೂ ಕಡಿಮೆ ದರದಲ್ಲಿ ಎಥೆನಾಲ್‌ ಲಭ್ಯವಾಗಲಿದೆ. ಪೆಟ್ರೋಲ್​ ನಲ್ಲಿ ಎಥೆನಾಲ್ ಹಾಕಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಥೆನಾಲ್​ ಅನ್ನು ಡೀಸೆಲ್​ ನಲ್ಲಿ ಉಪಯೋಗಿಸಲಾಗುವುದು ಎಂದು ತಿಳಿಸಿದರು.

ಸುರೇಶ್ ಅಂಗಡಿ ಇದ್ದಾಗ ಬೆಳಗಾವಿಯಲ್ಲಿ ರಿಂಗ್ ರಸ್ತೆ ಕನಸು ಇತ್ತು. ಈಗ ಬೆಳಗಾವಿಯಲ್ಲಿ ರಿಂಗ್ ರಸ್ತೆ ಯೋಜನೆಗೆ ಚಾಲನೆ ಕೊಟ್ಟಿದ್ದೇವೆ. ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ಕಾಮಗಾರಿ ಮಾಡುವ ಯೋಜನೆ ಇತ್ತು. ನಾವು ಗ್ರೀನ್ ಫೀಲ್ಡ್ ಎಕ್ಸ್​ಪ್ರೆಸ್​ ಹೈವೇ ನಿರ್ಮಿಸುತ್ತಿದ್ದೇವೆ. ಮುಳ್ಳಯ್ಯನಗಿರಿ, ಅಂಜನಾದ್ರಿ ಬೆಟ್ಟ ಅಭಿವೃದ್ಧಿ ಕಾಮಗಾರಿ ಆರಂಭವಾಗಿದೆ. ಕರ್ನಾಟಕದಲ್ಲಿ ಕಬ್ಬು ಹೆಚ್ಚಿನ‌ ಸಂಖ್ಯೆಯಲ್ಲಿ ಬೆಳೆಯುತ್ತಾರೆ. ಬೆಳಗಾವಿಯಲ್ಲಿ 28 ಸಕ್ಕರೆ ಕಾರ್ಖಾನೆಗಳಿವೆ ಎಂದು ನಿತಿನ್ ಗಡ್ಕರಿ ತಿಳಿಸಿದರು.

Key words: Belgaum -center – production – fuel- airplanes – Union Minister- Nitin Gadkari.