ದೇವಾಲಯಗಳ ಹಣಕ್ಕೆ ಸರ್ಕಾರ ಕನ್ನ ಎಂದು ಆರೋಪಿಸಿದ್ದ ಬಿವೈ ವಿಜಯೇಂದ್ರಗೆ ಸಚಿವ ರಾಮಲಿಂಗರೆಡ್ಡಿ ತಿರುಗೇಟು.

ಬೆಂಗಳೂರು,ಫೆಬ್ರವರಿ,22,2024(www.justkannada.in): ಶ್ರೀಮಂತ ದೇವಾಲಯಗಳ ಹಣಕ್ಕೆ ಸರ್ಕಾರ ಕನ್ನ ಹಾಕುತ್ತಿದೆ  ಎಂದು ಆರೋಪಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ  ಬಿವೈ ವಿಜಯೇಂದ್ರಗೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗರೆಡ್ಡಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ರಾಮಲಿಂಗರೆಡ್ಡಿ, ಹಿಂದೂ ದೇಗುಲಗಳ ಹಣ ಬೇರೆಡೆ ಬಳಕೆಯಾಗಿಲ್ಲ. ಮುಜರಾಯಿ ಇಲಾಖೆಗೂ ಬರಲ್ಲ  ಧಾರ್ಮಿಕ ಪರಿಷತ್ ಖಾತೆಯಲ್ಲಿ ಇರುತ್ತೆ. ಬಿಜೆಪಿ ರಾಜ್ಯಾಧ್ಯಕ್ಷರಿಗೆ ಕಾನೂನಿನ ಬಗ್ಗೆ ಗೊತ್ತಿಲ್ಲವಾ..? ವಿವಾದ ಮಾಡೋದೇ ಬಿಜೆಪಿ ಹುಟ್ಟುಗುಣ ಎಂದು ಕಿಡಿಕಾರಿದರು.

2011ರಲ್ಲಿ  ಹೆಚ್ಚು ಆದಾಯ ಬರುವ ದೇವಸ್ಥಾನಗಳಿಂದ ಆದಾಯ ಸಂಗ್ರಹಹಿಸಿದ್ದು ಬಿಜೆಪಿ.  2011ರಲ್ಲೇ ಬಿಎಸ್ ವೈ ಸರ್ಕಾರ ಹಣ ಪಡೆಯುತ್ತಿತ್ತು ದೇವಾಲಯಗಳಿಂದ ಹಣ ಸಂಗ್ರಹ ಬಿಜೆಪಿಯೇ ಮಾಡಿದ್ದು. ಬಿಜೆಪಿಯವರ ಕಾಯ್ದೆಗಳಿಗೆ ನಾವು ತಿದ್ದುಪಡಿ ಮಾಡಿದ್ದೇವೆ ಅಷ್ಟೆ ಎಂದು ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

Key words: Minister-Ramalingareddy – BY Vijayendra – government -stealing -money -temples.