ಬೊಲೆರೋ ವಾಹನ ಮತ್ತು ಬೈಕ್ ನಡುವೆ ಡಿಕ್ಕಿ : ಇಬ್ಬರು ಸಾವು…

ಮೈಸೂರು,ಅಕ್ಟೋಬರ್,18,2020(www.justkannada.in): ಬೊಲೆರೋ ವಾಹನ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಇಬ್ಬರು ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ನಡೆದಿದೆ.jk-logo-justkannada-logo

ನಂಜನಗೂಡು ತಾಲ್ಲೂಕಿನ ಯಲಚಗೆರೆ ಬೋರೆ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಪುಟ್ಟಸ್ವಾಮಿ (23) ನಾಗರಾಜ್  (37) ಮೃತಪಟ್ಟವರು. ಮೃತಪಟ್ಟ ಇಬ್ಬರು ಕೂಡ್ಲಾಪುರ ಗ್ರಾಮದವರು ಎಂದು ತಿಳಿದು ಬಂದಿದೆ.collides-between-bolero-vehicle-bike-two-deaths-mysore

ಪುಟ್ಟಸ್ವಾಮಿ ಹಾಗೂ ನಾಗರಾಜ್ ಬೆಳಗ್ಗೆ ಕೆಲಸಕ್ಕೆ ಹೋಗುವಾಗ  ಬೊಲೊರೋ ವಾಹನ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಈ ಕುರಿತು ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: collides- between – Bolero vehicle –bike-Two deaths-mysore