ನಮ್ಮ ಸಮುದಾಯವರನ್ನ ಸಿಎಂ ಮಾಡಿ ಅಂತ ಕೇಳ್ತೇವೆ-ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿಕೆ…

ಕೊಪ್ಪಳ,ಅಕ್ಟೋಬರ್,18 2020(www.justkannada.in): ಚುನಾವಣೆಗಳಲ್ಲಿ ನಮ್ಮ ಸಮುದಾಯ ಬಿಜೆಪಿ ಬೆಂಬಲಿಸಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ನಮ್ಮ ಸಮುದಾಯವರನ್ನ ಸಿಎಂ ಮಾಡಿ ಎಂದು ಕೇಳುತ್ತೇವೆ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದ್ದಾರೆ.jk-logo-justkannada-logo

ಕೊಪ್ಪಳದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ವಾಲ್ಮೀಕಿ ಗುರುಪೀಠದ ಪ್ರಸನ್ನಾಂದಪುರಿ ಸ್ವಾಮೀಜಿ, ನಮ್ಮ ಸಮುದಾಯದವರನ್ನ ಸಿಎಂ ಮಾಡಿ ಎಂದು ಮುಂದಿನ ದಿನಗಳಲ್ಲಿ ಸಿಎಂ ಹಾಗೂ ಪಕ್ಷದವರಿಗೆ ಕೇಳುತ್ತೇವೆ. ನಮ್ಮ ಸಮುದಾಯದವರಿಗೆ ಡಿಸಿಎಂ ಹುದ್ದೆ ನೀಡುವ ಕುರಿತು ಮಾಧ್ಯಮಗಳಲ್ಲಿ ಚರ್ಚೆಯಾಗಿತ್ತು. ಹೀಗಾಗಿ ಇದರಂತೆ ಡಿಸಿಎಂ ಸ್ಥಾನ ಕೊಡಬೇಕು ಎಂದು ಆಗ್ರಹಿಸುತ್ತೇನೆ. ಆದರೇ ಡಿಸಿಎಂ ಮಾಡುವ ಅಧ್ಯಾಯ ಮುಗಿದಂತೆ ಕಾಣುತ್ತಿದೆ ಎಂದರು.koppal-cm-our-community-valmiki-gurupeeta-prasanandapuri-swamiji

ಇನ್ನು ಮುಂದಿನ ಚುನಾವಣೆಗಳಲ್ಲಿ ನಮ್ಮ ಸಮುದಾಯ ಬಿಜೆಪಿ ಬೆಂಬಲಿಸುತ್ತದೆ. ಹೀಗಾಗಿ ಸಿಎಂ ಮತ್ತು ಪಕ್ಷದ ಬಳಿ ಮುಂದಿನ ದಿನಗಳಲ್ಲಿ ನಮ್ಮ ಸಮುದಾಯವರನ್ನ ಸಿಎಂ ಮಾಡಿ ಎಂದು ಕೇಳಿಕೊಳ್ಳುತ್ತೇವೆ ಎಂದು ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.

Key words: koppal-CM – our community- Valmiki Gurupeeta-Prasanandapuri Swamiji