ಡಿಕೆಶಿ ಬೆಳೆಸಿ ಬೆಳೆಯೋ ನಾಯಕರಾಗಿದ್ರೆ ಸುಧಾಕರ್, ಸೋಮಶೇಖರ್ ಅವರು ಕಾಂಗ್ರೆಸ್ ಬಿಡ್ತಿದ್ರಾ..? – ಸಿ.ಟಿ ರವಿ ಟಾಂಗ್…

ಬೆಂಗಳೂರು,ಅಕ್ಟೋಬರ್,18,2020(www.justkannada.in):  ಡಿ.ಕೆ ಶಿವಕುಮಾರ್ ಬೆಳೆಸಿ ಬೆಳೆಯೋ ನಾಯಕರಾಗಿದ್ದರೇ ಸುಧಾಕರ್ ಮತ್ತು ಎಸ್.ಟಿ ಸೋಮಶೇಖರ್ ಅವರು ಕಾಂಗ್ರೆಸ್ ಬಿಡ್ತಿದ್ರಾ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಪ್ರಶ್ನಿಸಿದ್ದಾರೆ.jk-logo-justkannada-logo

ಇಂದು ಬೆಂಗಳೂರಿನಲ್ಲಿ ಮಾತನಾಡಿದ ಸಿ.ಟಿ ರವಿ, ಬರೀ ಜಾತಿ ರಾಜಕಾರಣ ಮಾಡುತ್ತಿದ್ದೀರಲ್ಲ. ಡಿ.ಕೆ ಶಿವಕುಮಾರ್ ಅವರೇ ರಾಮನಗರದಲ್ಲಿ ಎಷ್ಟು ಗೆದ್ದಿದ್ದೀರಾ..? ನಾನು ಒಕ್ಕಲಿಗ ಅಲ್ವಾ..? ಆರ್ ಅಶೋಕ್ ಒಕ್ಕಲಿಗ ಅಲ್ವಾ…? ರಾಜಕಾರಣ ಮಾಡುವುದಕ್ಕಾಗಿ ನಾವು ಜಾತಿ ತರುವುದಿಲ್ಲ ಎಂದು ಡಿ.ಕೆ ಶಿವಕುಮಾರ್ ಗೆ ಟಾಂಗ್ ನೀಡಿದರು.

ಹಾಗೆಯೇ ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ಮುಂದುವರೆಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಅವರಶಾಸಕರ ಮನೆಗೆ ಬೆಂಕಿ ಹಾಕಿದಾಗ ಸತ್ಯ ಹೇಳಲಿಲ್ಲ. ಡೆಪೋಸಿಟ್ ಸಿಗಲ್ಲ ಅಂತಾ ಸತ್ಯ ಹೇಳಲಿಲ್ಲ. ಶಿರಾದಲ್ಲಿ ಅವರ ಅಭ್ಯರ್ಥಿಯನ್ನ ಅವರೇ ಸೋಲಿಸುತ್ತಾರೆ ಎಂದು ಲೇವಡಿ ಮಾಡಿದರು.bjp-national-general-secretary-ct-ravi-kpcc-president-dk-shivakumar-tong

ಜತೆಯಲ್ಲಿದ್ದವರನ್ನ ಮುಗಿಸುವುದರಿಂದ ನಾಯಕತ್ವ ಬರಲ್ಲ. ಡಿ.ಕೆ ಶಿವಕುಮಾರ್ ಬೆಳೆಸಿ ಬೆಳೆಯೋ ನಾಯಕರಾಗಿದ್ದರೇ ಸುಧಾಕರ್ ಮತ್ತು ಎಸ್.ಟಿ ಸೋಮಶೇಖರ್ ಅವರು ಕಾಂಗ್ರೆಸ್ ಬಿಡ್ತಿದ್ರಾ..? ಎಂದು ಪ್ರಶ್ನಿಸಿದರು.

Key words: BJP -national general secretary- CT Ravi-kpcc president- DK shivakumar- tong